ಚಿತ್ರದುರ್ಗ: ಪ್ರೇಯಸಿಯೊಂದಿಗೆ ಲಾಡ್ಜ್‌ಗೆ ಹೋಗಿದ್ದ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ವಿವಾಹಿತ ಗೋಪಾಲ ಬೇರೊಬ್ಬ ವಿವಾಹಿತ ಮಹಿಳೆಯೊಂದಿಗೆ ಲಾಡ್ಜ್‌ಗೆ ಬಂದಿದ್ದರು ಎನ್ನಲಾಗಿದೆ. ಗೋಪಾಲಗೆ ಒಂದು ವರ್ಷದ ಹಿಂದೆ ಹಾವೇರಿ ಮೂಲದ ಮಹಿಳೆಯೊಬ್ಬರ ಪರಿಚಯವಾಗಿ ಆಕೆಯೊಂದಿಗೆ ಪ್ರೇಮ ವ್ಯವಹಾರವಿತ್ತು ಎನ್ನಲಾಗಿದೆ.
ಕಳೆದ ಆರು ತಿಂಗಳಿನಿಂದ ಸಂಬಂಧ ಹೊಂದಿದ್ದ ಇವರು ಜು. 4ರಂದು ಇಲ್ಲಿನ ಸರ್ಕಾರಿ ಬಸ್ಸು ನಿಲ್ದಾಣದ ಬಳಿಯ ಲಾಡ್ಜ್ ಒಂದಕ್ಕೆ ಹೋಗಿದ್ದರು. ಮಧ್ಯಾಹ್ನ 3.11ಕ್ಕೆ ಲಾಡ್ಜ್‌ಗೆ ಬಂದಿದ್ದ ಗೋಪಾಲ ಸಂಜೆ ಹೊತ್ತಿಗೆ ಕುಸಿದು ಬಿದ್ದಿದ್ದಾರೆ ಎಂದು ಪ್ರೇಯಸಿ ಹೇಳಿದ್ದಾಳೆ. ಎದೆ ನೋವಿನಿಂದ ಕುಸಿದು ಬಿದ್ದು, ಗೋಪಾಲ ಮೃತಪಟ್ಟಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಗೋಪಾಲ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವಳನ್ನು ಮದುವೆಯಾಗಿದ್ದ. ಈಗ ಗೋಪಾಲನನ್ನು ಕಳೆದುಕೊಂಡ ಕುಟುಂಬಕ್ಕೆ ಆಘಾತವಾಗಿದ್ದು, ಕಂಗಾಲಾಗಿದೆ.