Friday, February 14, 2025
HomeUncategorizedಸುಜೀರು: ಶ್ರೀರಾಮ ವೈದ್ಯನಾಥ ಭಜನಾ ಮಂದಿರ

ಸುಜೀರು: ಶ್ರೀರಾಮ ವೈದ್ಯನಾಥ ಭಜನಾ ಮಂದಿರ


ಜ.೧೨ರಂದು ಶತ ರುದ್ರಯಾಗ, ೧೩ರಂದು ೭೫ನೇ ವಾರ್ಷಿಕ ಏಕಾಹ ಭಜನೆ
ಬಂಟ್ವಾಳ:ಇಲ್ಲಿನ ಪುದು ಗ್ರಾಮದ ಸುಜೀರು ಎಂಬಲ್ಲಿ ಶ್ರೀ ಅರಸು ವೈದ್ಯನಾಥ ಜುಮಾದಿ ಬಂಟ ಹಾಗೂ ಪರಿವಾರ ದೈವಗಳು ಅನಾದಿ ಕಾಲದಿಂದ ನೆಲೆನಿಂತ ಪುಣ್ಯ ಭೂಮಿಯಲ್ಲಿ ೬ ಗ್ರಾಮಗಳ ಭಕ್ತರು ನಿರ್ಮಿಸಿದ್ದ ಶ್ರೀರಾಮ ವೈದ್ಯನಾಥ ಭಜನಾ ಮಂದಿರದಲ್ಲಿ ಜ.೧೨ರಂದು ನವಗ್ರಹ ಸಹಿತ ಶತ ರುದ್ರಯಾಗ ಮತ್ತು ೧೩ರಂದು ೭೫ನೇ ವಾರ್ಷಿಕ ಏಕಾಹ ಭಜನೆ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಹೇಳಿದ್ದಾರೆ.
ಸುಜೀರು ಶ್ರೀ ವೈದ್ಯನಾಥ ಕೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಕಳೆದ ಎಂಟು ವರ್ಷಗಳ ಹಿಂದೆ ಇಲ್ಲಿನ ದೈವ ನೀಡಿದ ಅಭಯದ ನುಡಿಯಂತೆ ಸ್ಥಳೀಯ ಗ್ರಾಮಗಳ ಸುಮಾರು ೫ಸಾವಿರಕ್ಕೂ ಮಿಕ್ಕಿ ಮಂದಿ ಭಕ್ತರು ಈ ಶತರುದ್ರ ಯಾಗ ನಡೆಸಲು ಮುಂದಾಗಿದ್ದಾರೆ ಎಂದರು.
ಈಗಾಗಲೇ ಜೇಡಿ ಮಣ್ಣಿನಿಂದಲ್ಲೇ ‘ಯಾಗ ಮಂಟಪ’ ರಚಿಸಲಾಗಿದ್ದು, ಪುರೋಹಿತ ಏರ್ಯ ರಘರಾಮ ಮಯ್ಯ ಇವರ ಪೌರೋಹಿತ್ಯದಲ್ಲಿ ಅಂದು ಬೆಳಿಗ್ಗೆ ೮.೩೦ ಗಂಟೆಗೆ ಯಾಗ ಆರಂಭಗೊAಡು ಸುಮಾರು ಎರಡೂವರೆ ತಾಸಿನ ಬಳಿಕ ಪೂರ್ಣಾಹುತಿ ನೀಡಲಾಗುತ್ತದೆ. ಇದೇ ವೇಳೆ ಶ್ರೀರಾಮ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಮಧ್ಯಾಹ್ನ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಸಂಜೆ ಧಾರ್ಮಿಕ ಸಭೆಯಲ್ಲಿ ಕುಂಟಾರು ರವೀಶ್ ಶಂತ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಸುಜೀರುಗುತ್ತು ಯಜಮಾನ ರಾಮಕೃಷ್ಣ ಚೌಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಭಜನಾ ಮಂದಿರ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು, ಗೌರವ ಸಲಹೆಗಾರ ಬಾಲಕೃಷ್ಣ ಗಾಂಭೀರ ಸುಜೀರುಗುತ್ತು, ಪ್ರಮುಖರಾದ ಲತೇಶ್ ಸುಜೀರ್, ಮಹೇಶ್ ಕೊಡಂಗೆ, ಕಿಶೋರ್ ಬದಿಗುಡ್ಡೆ ಇದ್ದರು.

RELATED ARTICLES
- Advertisment -
Google search engine

Most Popular