Thursday, December 5, 2024
Homeಸುಳ್ಯಸುಳ್ಯ: ಬೀಗ ಮುರಿದು ಅಂಗಡಿ ಮತ್ತು ಹೋಟೆಲ್‌ನಿಂದ ಕಳ್ಳತನ

ಸುಳ್ಯ: ಬೀಗ ಮುರಿದು ಅಂಗಡಿ ಮತ್ತು ಹೋಟೆಲ್‌ನಿಂದ ಕಳ್ಳತನ

ಸುಳ್ಯ, ನ.26:ಅಂಗಡಿ ಮತ್ತು ಹೋಟೆಲ್ ಗೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಣ ಕಳವುಗೈದ ಘಟನೆ ಕನಕಮಜಲು ಗ್ರಾಮದ ಕೋಡಿಯಲ್ಲಿ ನ.25ರಂದು ರಾತ್ರಿ ವರದಿಯಾಗಿದೆ.

ಕೋಡಿಯಲ್ಲಿರುವ ಜಗನ್ನಾಥ ಅವರ ಅಂಗಡಿ ಹಾಗೂ ಅದರ ಹಿಂಬದಿಯಲ್ಲಿರುವ ಮೋಹನ ಅವರ ಮಾಲಕತ್ವದ ಶ್ರೀರಾಮ್ ಹೋಟೆಲಿಗೆ ಕಳ್ಳರು ನುಗ್ಗಿದ್ದು ಹಣ ಕಳವುಗೈದಿರುವುದಾಗಿ ತಿಳಿದುಬಂದಿದೆ .ಬೆಳಿಗ್ಗೆ ಹೋಟೆಲ್ ಮಾಲಕ ಮೋಹನ ಹಾಗೂ ಜಗನ್ನಾಥ ಅವರು ಬಂದಾಗ ಘಟನೆ ಬೆಳಕಿಗೆ ಬಂದಿದೆ.ಕನಕಮಜಲ್ಲಿ ಕಳೆದ ಕೆಲವು ತಿಂಗಳಿನಿಂದ ಕಳ್ಳತ ಹಾವಳಿ ಜಾಸ್ತಿಯಾಗಿದ್ದು ಅವರನ್ನು ಮಟ್ಟ ಹಾಕಲು ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯ ಜನರು ದೂರಿದ್ದಾರೆ.

RELATED ARTICLES
- Advertisment -
Google search engine

Most Popular