Thursday, April 24, 2025
Homeಸುಳ್ಯಸುಳ್ಯ: ಅಪ್ರಾಪ್ತ ವಯಸ್ಸಿನ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಪೋಷಕರಿಗೆ ಬಿತ್ತು ದಂಡ

ಸುಳ್ಯ: ಅಪ್ರಾಪ್ತ ವಯಸ್ಸಿನ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಪೋಷಕರಿಗೆ ಬಿತ್ತು ದಂಡ

ಸುಳ್ಯ: ಕೆಲ ದಿನಗಳ ಹಿಂದಷ್ಟೇ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬೈಕ್ ಚಲಾಯಿಸಿಕೊಂಡು ಹೋದ ಅಪ್ರಾಪ್ತನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದ.. ಅದಾದ ಬಳಿಕ ನ್ಯಾಯಾಲಯವು ‘ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶವಿಲ್ಲ. ಒಂದು ವೇಳೆ ಎಲ್ಲಿಯಾದರೂ ಅಪ್ರಾಪ್ತರು ವಾಹನ ಚಲಾಯಿಸಿದ್ದು ಕಂಡುಬಂದಲ್ಲಿ ಪೋಷಕರೇ ಹೊಣೆಯಾಗುತ್ತಾರೆ. ಅವರಿಗೆಯೇ ದಂಡ ವಿಧಿಸಲಾಗುವುದು’ ಎಂದಿತ್ತು.

ಆದರೆ, ಇದೀಗ ಅದನ್ನೂ ಮೀರಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ನಿಡಿದರು. ಇದೀಗ ಪೋಷಕರಿಗೆ ನ್ಯಾಯಾಲಯವು ದಂಡ ವಿಧಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ನಗರದಲ್ಲಿ ಬಾಲಕ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಪೊಲೀಸರು ತಡೆ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದರು.

ಬಾಲಕನ ಪೋಷಕರಿಗೆ ಸುಳ್ಯ ನ್ಯಾಯಾಲಯವು 25 ಸಾವಿರ ರೂ. ದಂಡ ವಿಧಿಸಿದೆ. ಬಾಲಕನಿಗೆ ವಾಹನ ಚಾಲನೆ ಮಾಡಲು ನೀಡಿದ್ದಕ್ಕಾಗಿ ಸುಳ್ಯ ಪಿಎಸ್‌ಐ ಸಂತೋಷ್ ಬಿ.ಪಿ. ಅವರು ವಾಹನ ಮಾಲಕರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular