ಸುಳ್ಯ: ಮನೆ ಕಿಟಕಿಯ ಸರಳು ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ರೂಮಿನ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವುಗೈದ ಘಟನೆ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮೂವಪ್ಪ ಎಂಬಲ್ಲಿ ನಡೆದಿದೆ.
ಕೊಡಿಯಾಲ ಗ್ರಾಮದ ಮೂವಪ್ಪ ಎಂಬಲ್ಲಿನ ನಿವಾಸಿ ನಸೀರ ಐ ಎಚ್ (28) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ನಸೀರ ಅವರು ತನ್ನ ಮನೆಯಲ್ಲಿ ಮೂರು ದಿನಗಳ ಕಾಲ ಇರಲಿಲ್ಲ ಬಳಿಕ ಮನೆಗೆ ಬಂದಾಗ ಬೆಡ್ ರೂಮಿನ బాగిలు ಒಳಗಡೆಯಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡ ಅವರು ಮನೆಯ ಬೆಡ್ ರೂಮಿನ ಕಿಟಕಿಯ ಬಳಿ ಬಂದು ನೋಡಿದಾಗ ಯಾರೋ ಕಳ್ಳರು ಕಿಟಕಿಯ ಬಾಗಿಲಿನ ಗಾಜು ಮುರಿದು ಚಿಲಕ ತೆಗೆದು ಕಿಟಕಿಯ ಸರಳನ್ನು ಪಿಕ್ಕಾಸಿನಿಂದ ಮುರಿದು ಒಳ ನುಗ್ಗಿ ಬೆಡ್ ರೂಮಿನ ಗಾದ್ರೇಜ್‌ನಲ್ಲಿದ್ದ ಸುಮಾರು 1.48 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಚಿನ್ನವನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.