Monday, February 10, 2025
Homeಸುಳ್ಯಸುಳ್ಯ : ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ – ದೂರು ದಾಖಲು

ಸುಳ್ಯ : ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ – ದೂರು ದಾಖಲು

ಸುಳ್ಯ: ಮಹಿಳೆಯೊಬ್ಬರು ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಾಪತ್ತೆಯಾಗಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಲೆಟ್ಟಿ ಗ್ರಾಮದ ಪರಿವಾರಕಾನ ನಿವಾಸಿ ನಂದಿನಿ (27)ಯವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಿಂದ ಕಾಣೆಯಾಗಿದ್ದಾರೆ.

ಪತಿ ರಾಜೇಂದ್ರ(40) ಟೈಲ್ಸ್ ಕೆಲಸ ಮಾಡುವವರಾಗಿದ್ದು ಪರಿವಾರಕಾನದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಇವರ ಇಬ್ಬರು ಮಕ್ಕಳಾದ ಸೈಂಟ್ ಜೋಸೆಪ್ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ(8) ಇನ್ನೊಬ್ಬಾಕೆ 2 ವರ್ಷ ಪ್ರಾಯದ ಅನುಷ್ಕಾ ಅಂಗನವಾಡಿಗೆ ಹೋಗುತ್ತಿದ್ದರು.

ಕಳೆದ ಒಂದು ವಾರದ ಹಿಂದೆ ಗಂಡ ಹೆಂಡತಿ ಮಧ್ಯೆ ಜಗಳವಾಗಿ ನಡೆದು ನಂದಿನಿ ತನ್ನ ತವರು ಮನೆಗೆ ಮಕ್ಕಳೊಂದಿಗೆ ಹೋಗಿ ಬಂದಿದ್ದರು. ಇದೀಗ ಜ. 7 ರಂದು ತನ್ನ ಮನೆಯಿಂದ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ ಎಂದು ರಾಜೇಂದ್ರರವರು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular