Wednesday, September 11, 2024
Homeಸುಳ್ಯಸುಳ್ಯ | ಭಾರೀ ಮಳೆಗೆ ಕೊಲ್ಲಮೊಗ್ರು ಸೇತುವೆ ಮುಳುಗಡೆ

ಸುಳ್ಯ | ಭಾರೀ ಮಳೆಗೆ ಕೊಲ್ಲಮೊಗ್ರು ಸೇತುವೆ ಮುಳುಗಡೆ

ಸುಳ್ಯ: ತಾಲೂಕಿನ ಕೊಲ್ಲಮೊಗ್ರು ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಕೊಲ್ಲುಮೊಗ್ರು ಪೇಟೆ ಸಮೀಪದ ಸೇತುವೆ ಮುಳುಗಡೆಯಾಗಿ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಕೊಲ್ಲಮೊಗ್ರು ಗ್ರಾಮದ ಮಾಯಿಲಕೋಟೆ, ಕಡಂಬಳ ಪ್ರದೇಶಗಳಲ್ಲಿ ಸಂಜೆ 5ರಿಂದ 6.30ರ ನಡುವೆ ಭಾರೀ ಮಳೆಯಾಗುತ್ತು. ಇದು ಆ ಪ್ರದೇಶದ ಹೊಳೆಯಲ್ಲಿ ಭಾರೀ ಪ್ರಮಾಣದ ನೀರು ಹರಿದುಬರಲು ಕಾರಣವಾಯಿತು. ಇದರಿಂದಾಗಿ ಸೇತುವೆ ಮುಳುಗಡೆಯಾಗಿತ್ತು. ಪ್ರದೇಶದ ತೋಟ, ರಸ್ತೆಗಳಿಗೂ ನೀರು ನುಗ್ಗಿ ಸಮಸ್ಯೆಗಳಾದವು. ಸುಳ್ಯ ತಾಲೂಕಿನ ಇತರೆಡೆ ಸಾಧಾರಣ ಮಳೆಯಾಗಿತ್ತು.

RELATED ARTICLES
- Advertisment -
Google search engine

Most Popular