ಕಾರ್ಕಳ ಅ 28: ಪರಶುರಾಮ ಥೀಂ ಪಾರ್ಕ್ ವಿಚಾರವಾಗಿ ಮೊದಲಿನಿಂದಲೂ ನಾವು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸುತ್ತ ಬಂದಿದ್ದೇವೆ. ತನಿಖೆಗೆ ಯಾವುದೆ ವಿರೋಧ, ಆಕ್ಷೇಪ ವ್ಯಕ್ತಪಡಿಸದೆ ಸಹಕರಿಸಿದ್ದೇವೆ. ಈಗ ನಡೆಯುತ್ತಿರುವ ರಾಜಕೀಯ ಪ್ರೇರಿತ ತನಿಖೆ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಜಿ.ಪಂ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಪಾರದರ್ಶಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಹೇಳಿಕೆ ನೀಡಿರುವ ಅವರು, ಹೈಕೋರ್ಟ್ ತನಿಖೆಗೆ ಅಡ್ಡಿಪಡಿಸುವುದಿಲ್ಲ ಎಂದಿದೆ. ಅದರಂತೆ ತನಿಖೆ ನಡೆಯಲಿ, ಕೋರ್ಟ್ ಹೇಳಿಕೆಯಿಂದ ನಮ್ಮ ಆರಂಭ ದಿನಗಳಿಂದ ಇದ್ದ ಆಗ್ರಹಕ್ಕೆ ಬಲ ಬಂದಿದೆ. ಸರಕಾರ ಈಗ ಮಾಡಬೇಕಿರುವುದು ಪ್ರಾಮಾಣಿಕ, ಪಾರದರ್ಶಕ ತನಿಖೆಯೇ ಹೊರತು ರಾಜಕಾರಣ ಪ್ರಾಯೋಜಿತ ತನಿಖೆಯಲ್ಲ ಎಂದಿದ್ದಾರೆ.
ಪೊಲೀಸರು ಕಾಂಗ್ರೆಸ್ ಕೈಗೊಂಬೆ ಕಾಂಗ್ರೆಸ್ ಕಾರ್ಯಕರ್ತನ ದೂರಿನ ಅನ್ವಯ ತನಿಖೆಯನ್ನು ಕಾಂಗ್ರೆಸ್ ನ ಕೈಗೊಂಬೆ ರೀತಿಯಲ್ಲಿ ಪೊಲೀಸರು ಬೆದರಿಸಿ, ಗದರಿಸಿ ನಡೆಸುತ್ತಿರುವುದು ಅಕ್ಷಮ್ಯ ಅಪರಾದ ಮತ್ತು ಇದಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ ಎಂದಿದ್ದಾರೆ.
ಟೂಲ್ ಕಿಟ್ ಗ್ಯಾಂಗ್ ಗೆ ಕಪಾಳಮೋಕ್ಷ ಹೈಕೋರ್ಟ್ ಎತ್ತಿರುವ ಆಕ್ಷೇಪಗಳು ಥೀಂ ಪಾರ್ಕ್ ವಿರುದ್ಧ ಟೂಲ್ ಕಿಟ್ ರಾಜಕಾರಣ ನಡೆಸುತ್ತಿದ್ದವರಿಗೆ ಕಪಾಳ ಮೋಕ್ಷ ಮಾಡಿದಂತಿದೆ. ಪರಶುರಾಮನ ಪ್ರತಿಮೆ ಫೈಬರ್ ನಿಂದ ನಿರ್ಮಿಸಿದ್ದು ಎಂದು ಕಾರ್ಕಳ ಕಾಂಗ್ರೆಸ್ಸು ಹೇಳಿತ್ತು. ಹೈಕೋರ್ಟ್ ಆದೇಶದಲ್ಲಿ ಇದು ಫೈಬರ್ ನಿಂದ ಮಾಡಿದ್ದು ಎಂಬ ಉಲ್ಲೇಖವಿಲ್ಲ. ಈ ಬಗ್ಗೆ ಎನ್ಐಟಿಕೆ ನೀಡಿದ ವರದಿಯನ್ನು ಕೋರ್ಟ್ ಉಲ್ಲೇಖಿಸಿದೆ. ನ್ಯಾಯಲಯವೇ ಕಂಚಿನ ಪ್ರತಿಮೆ ಎಂದು ಅಭಿಪ್ರಾಯಪಟ್ಟಿದೆ. ಕಾಗಕ್ಕನ ಕಥೆಯನ್ನು ಈ ಟೂಲ್ ಕಿಟ್ ಗ್ಯಾಂಗ್ ಪುನಾರುಚ್ಚರಿಸುತ್ತ ಡಂಗುರ ಹೊಡೆಯುವುದಕ್ಕೆ ಇನ್ನು ಸಾಧ್ಯವಿಲ್ಲ ಎಂದಿರುವರು.
ಶಾಸಕರ ಹೆಸರು ಉಲ್ಲೇಖವಿಲ್ಲ ಹೈಕೋರ್ಟ್ ಆದೇಶದಲ್ಲಿ ಕಾಂಗ್ರೆಸ್ ನ ಟೂಲ್ ಕಿಟ್ ಗ್ಯಾಂಗ್ ಶಾಸಕ ಸುನೀಲ್ ಕುಮಾರ್ ವಿರುದ್ಧ ಮಾಡುತ್ತಿದ್ದ ಆರೋಪಗಳ ಬಗ್ಗೆ ಒಂದಕ್ಷರವೂ ಉಲ್ಲೇಖವಿಲ್ಲ. ತೀರ್ಪಿನಲ್ಲಿ ಪ್ರತಿಮೆ ಹೊರತುಪಡಿಸಿ ಇತರ ಕಾಮಗಾರಿಗಳ ಬಗ್ಗೆ ಎಲ್ಲಿಯೂ ಆಕ್ಷೇಪವಿಲ್ಲ.
ಥೀಂ ಪಾರ್ಕ್ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳದವರಿಗೆ ಇನ್ನು ಸ್ಪಷ್ಟೀಕರಣಕೊಟ್ಟು ಪ್ರಯೋಜನವೂ ಇಲ್ಲ ಅರ್ಥೈಸಲು ಸಾಧ್ಯವಿಲ್ಲ.
ಎಲ್ಲವೂ ಕಾಂಗ್ರೆಸ್ ಕೃಪಾಪೋಷಿತ ಥೀಂ ಪಾರ್ಕ್ ಕಾಮಗಾರಿ ನಡೆಸಲು ಆದೇಶವಾದಗ ಕೆಲಸಕ್ಕೆ ಅಡ್ಡಿಪಡಿಸಲು ರಸ್ತೆಗೆ ಮಣ್ಣು ಹಾಕಿದವರು, ಮಹಜರು ನಡೆಸಿದವರು, ದೂರು ಕೊಟ್ಟವರು, ಹಣ ಬಿಡುಗಡೆಗೆ ತಡೆಯೊಡ್ಡುತ್ತಿರುವುದು ಎಲ್ಲವನ್ನು ಕಾಂಗ್ರೆಸ್ಸಿಗರೆ ಮಾಡಿದ ಮೇಲೆ ತನಿಖೆಯೂ ಕಾಂಗ್ರೆಸ್ ಕೃಪಾಪೋಷಿತವಾಗಿಯೇ ನಡೆಯುತ್ತಿದೆ ಎಂದು ದೂರಿದರು ಕಾಂಗ್ರೆಸ್ಸಿಗೆ ಇದೊಂದು ಚಟ ರಾಜಕೀಯ ತೆವಳು, ಹತಾಶೆಯ ರಾಜಕಾರಣಕ್ಕೆ ಕಾರ್ಕಳದ ಅಭಿವೃದ್ದಿ ಪ್ರವಾದೋದ್ಯಮವನ್ನು ಇಲ್ಲಿನ ನಾಯಕರು ಬಲಿ ಕೊಡುತ್ತಿದ್ದಾರೆ. ಕ್ಷೇತ್ರ ಸರ್ವ ರಂಗದಲ್ಲಿ ಬೆಳೆಯುವುದನ್ನು ಸಹಿಸದೆ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ಸಿಗರು ತನಿಖೆಯಲ್ಲಿ ಹಸ್ತಕ್ಷೇಪ ನಡೆಸದೆ ಪಾರ್ದರ್ಶಕ ತನಿಖೆ ನಡೆದು ಅತಿ ಶೀಘ್ರ ಪಾರ್ಕ್ ಸಾರ್ವಜನಿಕರಿಗೆ ಬಳಕೆಗೆ ಮುಕ್ತವಾಗಲಿ. ಕಾರ್ಕಳ ಕಾಂಗ್ರೆಸ್ಸಿಗರಿಗೆ ವಿರೋಧಿಸುವುದೇ ಒಂದು ಚಟವಾಗಿದೆ ಎಂದು ಟೀಕಿಸಿದರು.