ಎಪ್ರಿಲ್ 7ರಂದು ಶತಮಾನದ ಹಿರಿಮೆ ಕಂಡ ಕೈಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ಮೂರುದಿನಗಳ ಮಕ್ಕಳ ಬೇಸಿಗೆ ಶಿಬಿರ ವನ್ನು ಪ್ರಶಸ್ತಿ ಪುರಸ್ಕೃತ, ಪುತ್ತೂರು ಸುದ್ದಿ ಬಿಡುಗಡೆ ಪ್ರತಿಭಾರಂಗ ಅಂಕಣಕಾರ ಹಿರಿಯ ಸಾಹಿತಿ,ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿದರು. “ಶತಮಾನ ಕಂಡ ಕೈಕಾರ ಶಾಲೆ, ಅತ್ಯುತ್ತಮ ಸ್ವಚ್ಛತೆ ಹಸಿರು ಪರಿಸರ ಉತ್ತಮ ಗೋಡೆ ಬರಹಗಳಿಂದ ಕಂಗೊಳಿಸುತ್ತದೆ, ಇಲ್ಲಿಯ ಶಿಕ್ಷಕರು ಕೂಡ ಬಹಳ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದ ಪ್ರತಿ ಮಕ್ಕಳು ಕೂಡ ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ, ಜೀವನದಲ್ಲಿ ಮುಂದೆ ಯಶಸ್ವಿಯಾಗಿ ಎಂದು ಶುಭ ಹಾರೈಸಿ,ಕಥೆ ಕವನದ ಮೂಲಕ ಕಿವಿಮಾತು ಹೇಳಿದರು.
ಶಿಬಿರದಲ್ಲಿ ಖ್ಯಾತ ಭಜನಾ ತರಬೇತುದಾರ ರಮೇಶ್ ಬಳ್ಳ ಮಾತನಾಡುತ್ತಾ “ಭಜನೆ ಉತ್ತಮ ಸಂಸ್ಕಾರಕ್ಕೆ ಬಹಳ ಅಗತ್ಯ ಮಕ್ಕಳು ಬಾಲ್ಯದಲ್ಲಿ ಇದನ್ನು ಅಳವಡಿಸಿಕೊಳ್ಳಿ ಎಂದು ಮಾರ್ಗದರ್ಶನ ಮಾಡಿದರು. ಬಹಳ ವರ್ಷದಿಂದ ಈ ಶಾಲೆಯ ಬಗ್ಗೆ ನಾನು ತಿಳಿದುಕೊಂಡಿದ್ದೇನೆ, ಇಲ್ಲಿ ಉತ್ತಮ ಸಂಸ್ಕಾರಯುತ ಶಿಕ್ಷಣ ದೊರೆಯುತ್ತಿದೆ..” ಎಂದು ಭಜನಾ ಕಾರ್ಯಕ್ರಮ ದ ಮೂಲಕ ಗಮನ ಸೆಳೆದರು.ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು
ಶಿವರಾಮಶೆಟ್ಟಿ ಬಿಲ್ಲಾಜೆ ಶುಭ ಹಾರೈಸಿದರು, ಶಾಲಾ ಹಿರಿಯ ವಿದ್ಯಾರ್ಥಿ ,ಎಲ್‌ಕೆಜಿ ಯುಕೆಜಿ ಅಭಿವೃದ್ಧಿ ಸಮಿತಿಯ ಕಿರಣ್ ರೈ ಪುಂಡಿಕಾಯಿ, ಹಿರಿಯ ಶಿಕ್ಷಣ ಪ್ರೇಮಿ,ದಾನಿ ಚಂದ್ರಹಾಸ ರೈ ಪನಡ್ಕ, ಪ್ರಜ್ವಲ್ ರೈ ತೊಟ್ಲ,ಇವರು ಶುಭ ಹಾರೈಸಿದರು. ಶಾಲಾ ಮುಖ್ಯ ಗುರು ಜಿಲ್ಲಾ ಪ್ರಶಸ್ತಿ ಪುರಸ್ಕೃತರು ಯೋಗ ಗುರುಗಳಾದ ರಾಮಣ್ಣ ರೈ, ಈ ಶಿಬಿರದಲ್ಲಿ ಭಜನೆ, ನೃತ್ಯ, ಹಾಡು, ರಂಗಗೀತೆ, ಕವನ ರಚನೆ, ದೇಶಿಯ ಆಟಗಳು, ಕ್ರಾಫ್ಟ್ ರಚನೆ, ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಯೋಗ ತರಬೇತಿ, ಧ್ಯಾನ, ಮತ್ತು ಮುದ್ರೆಗಳ ಬಗ್ಗೆ ತರಬೇತಿ ನೀಡಿ ಮಕ್ಕಳ ಮನ ರಂಜಿಸಿದರು.ಶಾಲಾ ಅಧ್ಯಾಪಕಿ ಶ್ರೀಮತಿ ಜಯಶ್ರೀ ಅವರು ಸ್ವಾಗತಿಸಿದರು, ಸೂರಜ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ರಾಜೇಶ್ವರಿ ಮೇಡಂ ಮತ್ತು ಶ್ರೀಮತಿ ಶೋಭಾ ಮೇಡಂ, ಧನ್ಯವಾದ ಮತ್ತು ಗೌರವಾರ್ಪಣೆ ಮಾಡಿದರು. ಸುಮಾರು 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ತಾಲೂಕು, ಗಡಿನಾಡು ಒಡ್ಯ ಪಾಣಾಜೆ,ದೂಮಡ್ಕ ಬೇರೆ ಬೇರೆ ಶಾಲೆಗಳಿಂದ ಭಾಗವಹಿಸಿ ಶಿಬಿರವನ್ನು ಸಂಪನ್ನ ಗೊಳಿಸಿದರು.
✍ ಮುಖ್ಯಗುರುಗಳು