ಮಿಜಾರು: ಸಂಡೇ ಫ್ರೆಂಡ್ಸ್, ನೂಯಿಬಡಗ ಮಿಜಾರು ಇದರ 17ನೇ ವರ್ಷದ ವಾರ್ಷಿಕೋತ್ಸವ
ಜನವರಿ 4ರಂದು ಫ್ರೆಂಡ್ಸ್ ಸರ್ಕಲ್ ವಠಾರದಲ್ಲಿ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ತೆಲಿಕೆ ಬೊಳ್ಳಿ ದೇವದಾಸ್ ಕಾಪಿಕಾಡ್ ತಂಡದ ಏರ್ಲಾ ಗ್ಯಾರಂಟಿ ಅತ್ತ್ ನಾಟಕ ಪ್ರದರ್ಶನ ನಡೆಯಿತು.
ಊರಿನ ಹಿರಿಯರಾದ ಕೃಷ್ಣ ಶೆಟ್ಟಿ ಮರಕಡಕರೆ ಇವರಿಗೆ ಗೌರವ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾದ ರಂಜಿತ್ ಪೂಜಾರಿ ತೋಡಾರು, ಯಶವಂತ್ ಭಂಡಾರಿ, ಪ್ರವೀಣ್,ಉಮೇಶ್ ಶೆಟ್ಟಿ, ರಮೇಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಗೀತಾ,ಹಾಗೂ ಸಂಡೇ ಫ್ರೆಂಡ್ಸ್ ನ ಅಧ್ಯಕ್ಷರಾದ ರಕ್ಷಿತ್ ಪೂಜಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು