Thursday, March 20, 2025
Homeಬೆಳ್ತಂಗಡಿಸುನಿಲ್ ರೆಡಿವೇರ‍್ಸ್ ಉದ್ಘಾಟನೆ:ಗ್ರಾಹಕರಿಗೆ ವಿನಯಪೂರ್ವ ಸೇವೆಯಿಂದ ಉನ್ನತ ಪ್ರಗತಿ: ವೀರು ಶೆಟ್ಟಿ

ಸುನಿಲ್ ರೆಡಿವೇರ‍್ಸ್ ಉದ್ಘಾಟನೆ:ಗ್ರಾಹಕರಿಗೆ ವಿನಯಪೂರ್ವ ಸೇವೆಯಿಂದ ಉನ್ನತ ಪ್ರಗತಿ: ವೀರು ಶೆಟ್ಟಿ

ಬೆಳ್ತಂಗಡಿ: ಪರಿಣತಿ ಮತ್ತು ಅನುಭವದೊಂದಿಗೆ ಗ್ರಾಹಕರಿಗೆ ಸೌಜನ್ಯಪೂರ್ಣ ಸೇವೆ ನೀಡಿದಲ್ಲಿ ವ್ಯವಹಾರದಲ್ಲಿ ಉನ್ನತ ಪ್ರಗತಿ ಸಾಧಿಸಬಹುದು ಎಂದು ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್ನ ಕಾರ್ಯದರ್ಶಿ ಎ.ವಿ. ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿ ಉಜಿರೆಯ ವಿನೋದ್ ಬೇಕಲ್‌ ಮತ್ತು ಆದರ್ಶ ಮಾಲಕತ್ವದ ಸುನಿಲ್ ರೆಡಿವರ‍್ಸ್ ಮಳಿಗೆಯನ್ನು ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು.                           ಧರ್ಮಸ್ಥಳ ಶಾಂತಿವನ ಟ್ರಷ್ಟ್ ಕಾರ್ಯದರ್ಶಿ ಬಿ ಸೀತಾರಾಮ ತೋಳ್ಪಡಿತ್ತಾಯ ಮುಖ್ಯ ಆಥಿತಿಗಳಾಗಿ ಮಾತನಾಡಿ  ವಿನೋದ್ ಬೇಕಲ್‌  ಕುಟುಂಬÀಸ್ಥರು ವ್ಯವಹಾರದಲ್ಲಿ ಅನುಭವ ಹೊಂದಿದ್ದು ಎಲ್ಲರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಈ ಮಳಿಗೆಯ ಎದುರುಗಡೆ ಮೂರು  ಕಲ್ಯಾಣ ಮಂಟಪ ಶೀಘ್ರದಲ್ಲೇ ಉದ್ಘಾಟನೆಯಾಗಲಿದ್ದು ಅಲ್ಲಿಗೆ ಬರುವ ಯಾತ್ರಿಗಳಿಗೆ ಈ ಮಳಿಗೆಯಿಂದ ಅನುಕೂಲವಾಗಲಿದೆ. ನೂತನ ಮಳಿಗೆ ಬೆಳಗಲಿ ಎಂದರು.
ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾ ಇವರು ನೂತನ ಮಳಿಗೆಗೆ ಭೇಟಿ ನೀಡಿ ಶುಭ ಹಾರೈಸಿದರು.
, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಪ್ರೀತಮ್‌ ಡಿ.,  ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಡಾ. ಮೃಣಾಲಿನಿ, ನಿವೃತ್ತ ಅಂಚೆ ಅಧಿಕಾರಿ ಶ್ರೀಧರ್,  ನಿವೃತ್ತ ಮುಖ್ಯ ಶಿಕ್ಷಕಿ ಕಲಾವತಿ, ಉಜಿರೆ ಶುಭಾಶಂಸನೆ ಮಾಡಿದರು.
ಪವಿತ್ರಸುನಿಲ್ ಧರ್ಮಸ್ಥಳ  ಸ್ವಾಗತಿಸಿ ನಿರೂಪಿಸಿದರು    
ಮಾಲಕರಾದ ವಿನೋದ್‌ಕುಮಾರ್ ಮತ್ತು ಆದರ್ಶ, ಕೆ.ಜೆ. ಹಾಗೂ ಸುನಿಲ್‌ಬೇಕಲ್ ಆಥಿತಿಗಳಿಗೆ ಶುಭಹಾರೈಸಿದರು.

RELATED ARTICLES
- Advertisment -
Google search engine

Most Popular