Sunday, July 21, 2024
Homeಅಂತಾರಾಷ್ಟ್ರೀಯ3ನೇ ಬಾರಿ ಬಾಹ್ಯಾಕಾಶ ಯಾನ ಆರಂಭಿಸಿದ ಭಾರತೀಯ ಮೂಲದ ಅಮೆರಿಕನ್‌ ಸುನೀತಾ ವಿಲಿಯಮ್ಸ್

3ನೇ ಬಾರಿ ಬಾಹ್ಯಾಕಾಶ ಯಾನ ಆರಂಭಿಸಿದ ಭಾರತೀಯ ಮೂಲದ ಅಮೆರಿಕನ್‌ ಸುನೀತಾ ವಿಲಿಯಮ್ಸ್

ವಾಷಿಂಗ್ಟನ್:‌ ಭಾರತ ಮೂಲದ ಅಮೆರಿಕನ್ ಗಗನಯಾತ್ರಿ‌ ಸುನೀತಾ ವಿಲಿಯಮ್ಸ್‌ ಹಾಗೂ ನಾಸಾ ಗಗನಯಾತ್ರಿ ಬುಚ್‌ ವಿಲ್ಮೋರ್‌ ಅವರನ್ನೊಳಗೊಂಡ ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶ ಪ್ರಯಾಣ ಆರಂಭಿಸಿದೆ. ಫ್ಲಾರಿಡಾದ ಕೇಪ್‌ ಕ್ಯಾನವರಲ್‌ ಬಾಹ್ಯಾಕಾಶ ಕೇಂದ್ರದಿಂದ ಪ್ರಯೋಗಾರ್ಥ ನೌಕೆಯ ಉಡ್ಡಯನ ನಡೆದಿದೆ. ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ ಇದಾಗಿದ್ದು, ಯಾನ ಆರಂಭಕ್ಕೂ ಮುನ್ನ ನಡೆ ಕ್ಯಾಲಿಪ್ಸೊ. ನಮ್ಮನ್ನು ಬಾಹ್ಯಾಕಾಶಕ್ಕೆ ಕರೆದೊಯ್ದು ಮತ್ತೆ ವಾಪಾಸ್‌ ಕರೆದುಕೊಂಡು ಬಾ ಎಂದು ಬಾಹ್ಯಾಕಾಶ ನೌಕೆಗೆ ಸುನೀತಾ ಸಂದೇಶ ನೀಡಿದ್ದಾರೆ.
ಭಾರತೀಯ ಕಾಲಮಾನ ರಾತ್ರಿ 9:30ಕ್ಕೆ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪುವ ನಿರೀಕ್ಷೆಯಿದೆ.
58 ವರ್ಷದ ಸುನೀತಾ ವಿಲಿಯಮ್ಸ್‌ ಮೂರನೇ ಬಾರಿಗೆ ಪರೀಕ್ಷಾರ್ಥ ನೌಕೆಯಲ್ಲಿ ಅಂತರಿಕ್ಷ ಯಾನ ಆರಂಭಿಸಿದ್ದಾರೆ. ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯ ಆರಂಭಿಕ ಪರೀಕ್ಷೆಗಳನ್ನು ನಡೆಸುವಲ್ಲಿ ಸುನೀತಾ ಹಾಗೂ ವಿಲ್ಮೋರ್‌ ಬಹಳ ಶ್ರಮಪಟ್ಟಿದ್ದಾರೆ ಎಂದು ನಾಸಾ ಹೇಳಿದೆ.

RELATED ARTICLES
- Advertisment -
Google search engine

Most Popular