ಶ್ರೀ ವಿವೇಕಾನಂದ ಯುವ ವೇದಿಕೆ (ರಿ) ಚಾರ ಮತ್ತು ಶ್ರೀ ಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ (ರಿ) ವತಿಯಿಂದ ಪ್ರತಿ ವರ್ಷದಂತೆ ಶಿಗಿಮೋ ಹೋಳಿ ಹಬ್ಬ ಆಚರಣೆ ಮಾಡಲು ಕುಡುಬಿ ಸಮುದಾಯದ ಕೂಡುಕಟ್ಟು ಮೆಳದವರಿಗೆ ಕಾಣಿಕೆ ನೀಡಿ ಬೆಂಬಲಿಸಲಾಯಿತು, ಈ ಸಂದರ್ಭದಲ್ಲಿ ಹೋಳಿ ಹಬ್ಬದ ಮನೆಯ ಗುರಿಕಾರ ಜೈರಾಮ್ ನಾಯ್ಕ, ಕೃಷ್ಣನಾಯ್ಕ, ನರಸಿಂಹ ನಾಯ್ಕ, ವಸಂತ ನಾಯ್ಕ, ಕೂಡು ಕಟ್ಟು ಬಳಗದವರು ವಿವೇಕಾನಂದ ವೇದಿಕೆ ಅಧ್ಯಕ್ಷರಾದ ಅಶೋಕ್ ನಾಯ್ಕ, ಜೋಮ್ಲು ಬೊಬ್ಬರ್ಯ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬಿ, ಎಂ ರವೀಂದ್ರನಾಥ ಶೆಟ್ಟಿ, ಮಿಥುನ್ ಶೆಟ್ಟಿ, ಆನಂದ ಶೆಟ್ಟಿ, ಭುಜಂಗ ಶೆಟ್ಟಿ, ರಾಜೇಶ್ ಪೂಜಾರಿ, ಕುಶಲ ಶೆಟ್ಟಿ , ಮದನ್ ಶೆಟ್ಟಿ, ಸುಮತಿ, ವನಜ ಶೆಟ್ಟಿ ಮೊದಲಾದ ಗ್ರಾಮಸ್ಥರು ಉಪಸ್ಥಿತರಿದ್ದರು.