Thursday, July 25, 2024
Homeರಾಷ್ಟ್ರೀಯಮಹಿಳೆಗೆ ಕಡ್ಡಾಯ ಮುಟ್ಟಿನ ರಜೆಗೆ ಮಾದರಿ ನೀತಿ ರಚಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಮಹಿಳೆಗೆ ಕಡ್ಡಾಯ ಮುಟ್ಟಿನ ರಜೆಗೆ ಮಾದರಿ ನೀತಿ ರಚಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ನವದೆಹಲಿ: ರಾಜ್ಯಗಳು ಮತ್ತು ಇತರೆ ಸಂಬಂಧಿತ ಮಧ್ಯಸ್ಥಿಕೆಗಾರರ ಜೊತೆ ಸಮಾಲೋಚನೆ ನಡೆಸಿ ಮಹಿಳಾ ಉದ್ಯೋಗಿಗಳ ಮುಟ್ಟಿನ ರಜೆ ಕುರಿತು ಮಾದರಿ ನೀತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಕಡ್ಡಾಯ ರಜೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿದ ನ್ಯಾಯಪೀಠ, ಇದು ನೀತಿಗೆ ಸಂಬಂಧಿಸಿದ ವಿಷಯವಾಗಿದ್ದು, ನ್ಯಾಯಾಲಯಗಳು ಪರಿಶೀಲಿಸುವುದಿಲ್ಲ ಎಂದು ಹೇಳಿದೆ. ಆ ರೀತಿ ನ್ಯಾಯಾಲಯದಿಂದ ಆದೇಶ ನೀಡುವುದು ವ್ಯತಿರಿಕ್ತ ಮತ್ತು ಹಾನಿಕಾರಕ ಪರಿಣಾಮ ಬೀರಬಹುದು. ಉದ್ಯೋಗದಾತರು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳದೆ ಇರಬಹುದು ಎಂದು ಕೋರ್ಟ್‌ ಹೇಳಿದೆ.


ಇದು ವಾಸ್ತವವಾಗಿ ಸರ್ಕಾರದ ನೀತಿಗೆ ಸಂಬಂಧಿಸಿದ್ದಾಗಿದೆ. ನ್ಯಾಯಾಲಯಗಳು ಇದನ್ನು ಪರಿಗಣಿಸುವಂತದ್ದಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

RELATED ARTICLES
- Advertisment -
Google search engine

Most Popular