spot_img
22.6 C
Udupi
Monday, January 30, 2023
spot_img
spot_img
spot_img

ಸುಪ್ರೀಂ ಕೋರ್ಟ್ ತೀರ್ಪು : ಪತ್ರಕರ್ತರಿಗೆ ಶ್ರೀರಕ್ಷೆ : ಪ್ರತ್ರಕರ್ತ ವಿ.ಜಿ.ವೃಷಭೇಂದ್ರ

ವಿಜಯನಗರ ಜಿಲ್ಲೆ ಕೂಡ್ಲಿಗಿ, ದೇಶದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ, ಯಾರೇ ಆದರೂ ಬೆದರಿಕೆಯೊಡ್ಡಿದರೆ, ಅಪಮಾನ ಮಾಡಿದರೆ. ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿರುವ, ಪ್ರಾಮಾಣಿಕ ಪತ್ರಕರ್ತರ ಕ್ಷೇಮಕ್ಕಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಬದರಿಕೆಯೊಡ್ಡಿದರೆ, ಅಪಮಾನ ಮಾಡಿದರೆ ಅಥವಾ ಥಳಿಸುವವರಿಗೆ,ರೂ 50ಸಾವಿರ ದಂಡ ಹಾಗೂ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ದೇಶದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಕುರಿತು ಬಹುತೇಕ ಮಾಧ್ಯಮಗಳಲ್ಲಿ, ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಿರುವುದನ್ನು ಸಾಮಾಜಿಕ ಜಾಲ ತಾಣಗಳು ಸಾಕಷ್ಟು ಪ್ರಚುರ ಪಡಿಸಿವೆ. ಕೋರ್ಟಿನ ತೀಪ್ರು ಸ್ವಾಗತಾರ್ಹ ವಾಗಿದೆ, ಮತ್ತು ಪತ್ರಕರ್ತರಿಗೆ ಶ್ರೀರಕ್ಷೆಯಾಗಿದೆ ಎಂದು ವಂದೇ ಮಾತರಂ ರಾಜ್ಯ ಮುಖಂಡ ಹಾಗೂ ಪತ್ರಕರ್ತ, ವಿ.ಜಿ.ವೃಷಭೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಜಿಕ ಕಾಳಜಿ ಯಿಂದ ಭ್ರಷ್ಟಾಚಾರದ ವಿರುದ್ಧ, ಕಾನೂನಿನ್ವಯ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ನಾಡಿನಲ್ಲಿರುವ ಸಾಮಾಜಿಕ ಸೈನಿಕರಾಗಿದ್ದಾರೆ. ಭ್ರಷ್ಟಾಚಾರ,ಅಕ್ರಮ,ಅನೈತಿಕ ಚಟುವಟಿಕೆಗಳ ವಿರುದ್ಧ ಹಾಗೂ ಸಮಾಜ ದ್ರೋಹಿಗಳ ವಿರುದ್ಧ ಮತ್ತು ನಾಡಿನ ಕಂಟಕ ಪ್ರಾಯ ದುಷ್ಠ ಕ್ರಿಮಿಗಳ ವಿರುದ್ದ, ನೈತಿಕ ಸಮರ ಸಾರುವ ಪ್ರಾಮಾಣಿಕ ನಿಷ್ಠಾವಂತ ಪತ್ರಕರ್ತರಿಗೆ ಸುಪ್ರೀಂ ಕೋರ್ಟ್ ತೀರ್ಪು ಶ್ರೀರಕ್ಷೆಯಾಗಿದ್ದು, ಪ್ರಾಮಾಣಿಕವಾಗಿ ಸಾಮಾಜಿಕ ಕಾಳಜಿಯಿಂದ ನಾಡಿನ ಸೇವೆ ಮಾಡಲು ಅನುಕೂಲ ಆಗಲಿದೆ. ಪತ್ರಕರ್ತರು ಇನ್ನಷ್ಟು ಪ್ರಭಾವ ಭೀರಿ ಕಾರ್ಯನಿರ್ವಹಿಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಬಡಿಗೇರ ನಾಗರಾಜ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಅಧ್ಯಕ್ಷ ಎಲೆ ನಾಗರಾಜ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ, ಮತ್ತಿತರೆ ಪತ್ರಕರ್ತರು ಇದ್ದರು.

Related Articles

Stay Connected

0FansLike
3,687FollowersFollow
0SubscribersSubscribe
- Advertisement -

Latest Articles