ಸುರತ್ಕಲ್: ಇಲ್ಲಿನ ಕಳವಾರು ಆಶ್ರಯ ಕಾಲೊನಿ ಬಳಿ ಆಟೊ ಚಾಲಕರೊಬ್ಬರ ಮೇಲೆ ತಂಡವೊಂದು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಘಟನೆ ನಡೆದಿದೆ. ಆಟೊ ಚಾಲಕ ಅಝರುದ್ದೀನ್ ಎಂಬವರ ಮೇಲೆ ಪ್ರಶಾಂತ್ ಕಳವಾರು, ಗಣೇಶ್ ಪುನೀತ್ ಮತ್ತಿತರರು ಹಲ್ಲೆ ನಡೆಸಿ, ರಸ್ತೆಗೆ ಅಡ್ಡವಾಗಿ ಮಲಗಿ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದರು ಎನ್ನಲಾಗಿದೆ. ಪ್ರಶಾಂತ್ ಕಳವಾರು ಹಾಗೂ ಗಣೇಶ್ ಆಟೊ ಚಾಲಕ ಅಝರುದ್ದೀನ್ ಗೆ ಕುತ್ತಿಗೆಗೆ ಹಾಗೂ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ಅವರ ಜೊತೆಗಿದ್ದ ಇಬ್ಬರೂ ಹಲ್ಲೆ ಮಾಡಿದ್ದಾರೆ. ಅಲ್ಲದೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.