ಸುರತ್ಕಲ್: ಇಲ್ಲಿಗೆ ಸಮೀಪದ ಕುಳಾಯಿ ಹೊಸಬೆಟ್ಟು ಯುವಚೇತನ ಸಂಸ್ಥೆಯ 31ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಸುರತ್ಕಲ್ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣೆ ವೇದಿಕೆ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಅಗರಿ ಪ್ರಶಸ್ತಿ, ಅಗರಿ ರಘುರಾಮ ಸಮಾನ, ಆಗರಿ ಸಂಸ್ಕರಣೆ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಜು.28ರಂದು ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಅಗರಿ ರಾಘವೇಂದ್ರ ರಾವ್ ಹೇಳಿದರು
ಅಗರಿ ಸಂಸ್ಥೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಈ ವೇಳೆ 2023ನೇ ಸಾಲಿನ ಪ್ರತಿಷ್ಠಿತ ಅಗರಿ ಪ್ರಶಸ್ತಿಗೆ ಅಭಿಜ್ಞ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಆಯ್ಕೆಯಾಗಿದ್ದು, ಅಗರಿ ರಘುರಾಮ ಸಮ್ಮಾನ ಪುರಸ್ಕಾರಕ್ಕೆ ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆ ಯಕ್ಷಗಾನ ಕಲಾರಂಗ ಆಯ್ಕೆಯಾಗಿದೆ ಎಂದರು.
ಜುಲೈ 28 ಭಾನುವಾರ ಸಂಜೆ 3ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯಾಸ್‌ನ ಶ್ರೀಪತಿ ಭಟ್ ವಹಿಸಲಿದ್ದಾರೆ. ಆಶೀರ್ವಚನವನ್ನು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ನೀಡಲಿದ್ದಾರೆ.
ಇದೇ ವೇಳೆ ಸಂಘದ ಸದಸ್ಯರಾದ ನಿಧಿಶ ಹೊಸಬೆಟ್ಟು, ರಾಘವೇಂದ್ರ ಎಚ್.ವಿ., ರಾಕೇಶ್ ಹೊಸಬೆಟ್ಟುರನ್ನು ಅಭಿನಂದಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಯುವಚೇತನ ಅಧ್ಯಕ್ಷ ಪ್ರಶಾಂತ್ ರಾವ್ ಎಚ್ ಮಾತನಾಡಿ ಜು.28ರಂದು ಬೆಳಗ್ಗೆ 9:30ರಿಂದ ಬ್ರಾಹ್ಮಣ ಸಮಾಜಕ್ಕಾಗಿ ಮಾತ್ರ ಸೀಮಿತವಾಗಿ ರುವ ಭಲೇ ಜೋಡಿ ಸೀಸನ್ -3 ಆಯೋಜಿಸಲಾಗಿದ್ದು ವಿಜೇತ ಜೋಡಿಗೆ ಪ್ರಥಮ ಚಿನ್ನದ ನಾಣ್ಯ ಮತ್ತು ದ್ವಿತೀಯ ಬೆಳ್ಳಿಯ ನಾಣ್ಯ ಬಹುಮಾನವಾಗಿ ನೀಡಲಾಗುವುದು. ಜೊತೆಗೆ ಎಲ್ಲಾ ಸಮುದಾಯದವರಿಗಾಗಿ ಕ್ರೀಡೋತ್ಸವ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಗರಿ ರಾಘವೇಂದ್ರ ರಾವ್, ಯುವಚೇತನ ಹೊಸಬೆಟ್ಟು ಅಧ್ಯಕ್ಷ ಪ್ರಶಾಂತ್ ರಾವ್ ಎಚ್., ಉಪಾಧ್ಯಕ್ಷ ಅಗರಿ ಕಿರಣ್ ರಾವ್, ಶೇಷಶಯನ, ಅಗರಿ ಅಭಿನಿತ್ ರಾವ್ ಮತ್ತಿತರರು ಉಪಸ್ಥಿತರಿದ್ದರು
ಸುರತ್ಕಲ್:ರಘುರಾಮ ಹೊಳ್ಳರಿಗೆ ಅಗರಿ ಪ್ರಶಸ್ತಿ; ಜುಲೈ 28ರಂದು ಪ್ರದಾನ
RELATED ARTICLES