ಲಿಟ್ಲ್ ಫ್ಲವರ್ ಪ್ರಿ ಸ್ಕೂಲ್ ಸುರತ್ಕಲ್ ಮತ್ತು ಕೃಷ್ಣಾಪುರ ಇವರು ಜನ್ಮಾಷ್ಟಮಿಯ ನಿಮಿತ್ತ ಮುದ್ದುಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆಯನ್ನು ನಡೆಸಿಕೊಟ್ಟರು. ಪೂರ್ವ ಶಾಲೆಯ ಪ್ರಾಂಶುಪಾಲೆ ರೇಷ್ಮಾ ಪೂಜಾರಿ ಹಾಗೂ ತೀರ್ಪುಗಾರರಾದ ತುಳಸಿ ಧರ್ಮರಾಜ್ ಮತ್ತು ಕ್ಷಿತಿಜ್ ರಾಜ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮವು ಚಿಕ್ಕ ಮಕ್ಕಳಿಗೆ ಕೃಷ್ಣ ದೇವರ ಬಗ್ಗೆ ತಿಳಿಯುವಂತೆ ಮಾಡುವುದಾಗಿತ್ತು. ಈ ಸ್ಪರ್ಧೆಯಲ್ಲಿ ಅನೇಕ ಮಕ್ಕಳು ಕೃಷ್ಣರಂತೆ ವೇಷ ಧರಿಸಿದ್ದರು ಮತ್ತು ಅವರ ತಾಯಂದಿರು ಯಶೋಧೆಯಾಗಿ ಭಾಗವಹಿಸಿದ್ದರು.