ಸುರತ್ಕಲ್ : ಅಗರಿ ಹಬ್ಬ ಹಬ್ಬಗಳ ಉತ್ಸವ, ನೂರು ದಿನ ನೂರು ಬಹುಮಾನ ಯೋಜನೆಗಳ ಏಳನೇ ಹಂತದ ಬಹುಮಾನ ವಿಜೇತರ ಆಯ್ಕೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ಅಗರಿ ಎಂಟರ್ಪ್ರೈಸಸ್ ಸುರತ್ಕಲ್ ಇಲ್ಲಿ ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಯಿತು. ಈ ಹಿಂದೆ ಆಯ್ಕೆಯಾದ 10 ಮಂದಿ ಸದಸ್ಯರಿಗೆ ಬಹುಮಾನವನ್ನು ವಿತರಿಸಲಾಯಿತು ಅಲ್ಲದೆ ಇಂದು ಹತ್ತು ಮಂದಿ ಬಹುಮಾನಕಾರರ ಆಯ್ಕೆ ಮಾಡಲಾಗಿ ಕ್ರಮವಾಗಿ ಮೂಡಬಿದ್ರೆ ಸುರತ್ಕಲ್ ಮಂಗಳೂರು ಸೇರಿದಂತೆ ಒಟ್ಟು ಆರು ಶಾಖೆಗಳ ಗ್ರಾಹಕರ ಆಯ್ಕೆ ಪ್ರಕ್ರಿಯೆ ಮಾಡಲಾಯಿತು.
ಗ್ರಾಹಕ ಸಂಖ್ಯೆ 29393,20781,20357,25550,26091,28514,26565,27855,33929,29610 ಹೀಗೆ ಒಟ್ಟು 10 ಮಂದಿಯನ್ನು ಎಂದು ಆಯ್ಕೆ ಮಾಡಲಾಯಿತು. ಮುಂದಿನ ಡ್ರಾ ದಿನಾಂಕದಂದು ಈ ಮೇಲಿನ ಸಂಖ್ಯೆಯ ಗ್ರಾಹಕರಿಗೆ ಪ್ರಶಸ್ತಿಯನ್ನ ವಿತರಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಅಗರಿ ರಾಘವೇಂದ್ರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಅಗರಿ ನಡೆದು ಬಂದ ದಾರಿ, ಸುಮಾರು 34 ವರ್ಷಗಳ ಸುದೀರ್ಘ ಮಾರುಕಟ್ಟೆ ಅನುಭವ, ಉತ್ತಮ ಗ್ರಾಹಕರ ನೆಟ್ವರ್ಕ್, ಸಿಬ್ಬಂದಿ ವರ್ಗದ ಪ್ರೋತ್ಸಾಹ, ಇವುಗಳೆಲ್ಲವೂ ಈ ಯಶಸ್ವಿಗೆ ಕಾರಣವಾಗಿದ್ದು, ಮುಂದಿನ ದಿನಗಳು ಇನ್ನೂ ಹೆಚ್ಚಿನ ಶಾಖೆಗಳು ಬರಲಿ, ಎಂದು ಹಾರೈಸಿದರು. ಅಗರಿ ಸಂಸ್ಥೆಯ ಮುಖ್ಯಸ್ಥರ ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದ್ದು ಅಗರಿ ಸಂಸ್ಥೆಯಿಂದ ಇನ್ನಷ್ಟು ಉತ್ತಮ ಕಾರ್ಯಗಳು ಬರಲಿ ಎಂದು ಹಾರೈಸಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಮತ್ತು ಧನ್ಯವಾದವನ್ನು ಶೇಷಶಯನ ಕಾರಿಂಜ ನೆರವೇರಿಸಿದರು. ಸಂದೀಪ್ ಇವರ ಮಾರ್ಗದರ್ಶನದಲ್ಲಿ , ಶಿವರಾಜ್ ಊರ್ವ, ಶಿವರಾಜ್, ಶ್ರೇಯಸ್, ಪ್ರಕಾಶ್, ಶೈಲಾ, ಪ್ರಮೀಳಾ, ಸದಾಶಿವ, ಸುದರ್ಶನ್, ರಾಘವೇಂದ್ರ ಭಟ್, ರಾಘವೇಂದ್ರ, ಭಾಗ್ಯಲಕ್ಷ್ಮಿ, ರಾಜೇಶ್ ಭಟ್, ಶ್ರೀನಿವಾಸ್ ಇವರೆಲ್ಲರ ಸಹಕಾರದೊಂದಿಗೆ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಇವರೆಲ್ಲರೂ ಸಹಕರಿಸಿದರು.