ಸುಮಾರು 25 ವರ್ಷಗಳಿಂದ ಎಚ್ ಪಿ ಸಿ ಎಲ್ ಅಡುಗೆ ಅನಿಲ ಜಾಡಿ ತುಂಬಿಸುವ ಘಟಕದಲ್ಲಿ ಈ ಸ್ಥಳೀಯ ಕಾರ್ಮಿಕರು ದುಡಿಯುತ್ತ ಬಂದಿರುತ್ತಾರೆ. ಅದರಲ್ಲೂ ಕೆಲವರು ಗಾರ್ಡನ್ ಕೆಲಸ ಮಾಡಿಕೊಂಡಿದ್ದು, ಈಗ ಹೊರ ರಾಜ್ಯದ ಕಂಪನಿಗೆ ಅದರ ಗುತ್ತಿಗೆ ದೊರಕಿದ್ದು, ಅವರು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಬೇರೆ ಕಾರ್ಮಿಕರನ್ನು ತಂದು ಇಲ್ಲಿ ನಿಯೋಜಿಸಿದರಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ ಎಂದು ಕಾರ್ಮಿಕರ ಅಗ್ರಹವಾಗಿದೆ ಮೇಲಾಧಿಕಾರಿಗಳು ಕಾರ್ಮಿಕರ ಯಾವುದೇ ಬೇಡಿಕೆಗೆ ಪ್ರತಿಸ್ಪಂದಿಸದೇ ಇರುವುದರಿಂದ ಸಂತ್ರಸ್ತ ಕಾರ್ಮಿಕರಿಗೆ ಬೆಂಬಲವಾಗಿ ಇತರ ಸೇವೆಯನ್ನು ನಿರ್ವಹಿಸುವ ಎಲ್ಲಾ ಕಾರ್ಮಿಕರು ಸೇರಿ ಹಠಾತ್ ಮುಷ್ಕರವನ್ನು ಮಾಡಿದರು. ಇದರಿಂದ ಬೇರೆ ಬೇರೆ ಕಡೆ ಅಡುಗೆ ಅನಿಲ ಜಾಡಿಗಳನ್ನು ಸರಬರಾಜು ಮಾಡುವ ಕಾರ್ಯವು ಸಗಿತಗೊಂಡಿದ್ದು ಲಾರಿಗಳು ಸಾಲಾಗಿ ನಿಂತಿದ್ದು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಹಾಗೂ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದ ಕಾರ್ಮಿಕರನ್ನು ಕೆಲಸದಿಂದ ತೆಗೆಯದೆ ಕೆಲಸದಲ್ಲಿ ಮುಂದುವರಿಸಲು ಕಂಪೆನಿ ಅವಕಾಶ ಮಾಡಿಕೊಡಬೇಕೆಂದು ಕಾರ್ಮಿಕರ ಆಗ್ರಹಿಸಿರುತ್ತಾರೆ ಈ ಬಗ್ಗೆ ಶಾಸಕರು ಬೆಂಗಳೂರಿನಲ್ಲಿ ಇರುವ ಕಾರಣ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್ ವೈ ಶೆಟ್ಟಿಯವರು ಎಚ್ ಪಿ ಸಿ ಎಲ್ ಉನ್ನತ ಮಟ್ಟದ ಅಧಿಕಾರಿಗಳಿಗೆ ಸ್ಥಳೀಯರನ್ನು ಈ ಕೂಡಲೇ ಕೆಲಸಕ್ಕೆ ಇಡಬೇಕೆಂದು ಪೋನ್ ಮೂಲಕ ಸೂಚಿಸಿದರು ಶಾಸಕರುಗಳ ಸೂಚನೆ ಮೇರೆಗೆ ಎಚ್ ಪಿ ಸಿ ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಯಿತು ಯಾವುದೇ ಕಾರಣಕ್ಕೂ ಸ್ಥಳೀಯರನ್ನು ಕಡೆಗಣಿಸಬಾರದು ಸ್ಥಳೀಯರಿಗೆ ಪ್ರಥಮ ಅದ್ಯತೆ ನೀಡಬೇಕು ಎಂ,ಅರ್,ಪಿ,ಎಲ್ ಮತ್ತು ಎಚ್ ಪಿ ಸಿ ಎಲ್ ಹಾಗೂ ಇತರ ಸಂಸ್ಥೆಗಳಲ್ಲಿ ಕಂಪೆನಿಯು ತುಂಡು ಗುತ್ತಿಗೆ ಕೊಡುವ ಮೂಲಕ ಕಾರ್ಮಿಕರನ್ನು ಕಡಿಮೆ ಮಾಡುತ್ತಿದೆ ಮತ್ತು ಹೊರ ರಾಜ್ಯದವರಿಗೆ ಗುತ್ತಿಗೆ ಕೊಡುವ ಮೂಲಕ ಸ್ಥಳೀಯರನ್ನು ಕೆಲಸದಿಂದ ತೆಗೆಯುವ ಕೆಲಸ ಮಾಡುತ್ತಿದೆ ಮಾತ್ರವಲ್ಲದೆ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಅದ್ಯತೆ ಅನುಭವ ಇದ್ದರೂ ಕೆಲ ಮಟ್ಟದ ಕೆಲಸಗಳನ್ನು ಕೊಟ್ಟು ದುಡಿಸಿ ಅವರೇ ಸಂಸ್ಥೆಯಿಂದ ಹೊರಹೋಗುವ ರೀತಿಯಲ್ಲಿ ಸಂಸ್ಥೆಯ ಕೆಲವು ಹೊರ ರಾಜ್ಯದ ಅಧಿಕಾರಿಗಳು ನಡೆಸುತ್ತಾ ಇದ್ದಾರೆ ಸಂಸ್ಥೆಯಿಂದ ಹೊರಹೋಗುವ ವಿಷ ಗಾಳಿ ವಿಷ ನೀರು ಕುಡಿಯುತ್ತಾ ಬದುಕುತ್ತಿರುವವರು ಸ್ಥಳೀಯರು ಸ್ಥಳೀಯರಿಗೆ ಖಾಯಂ ಉದ್ಯೋಗ ಸಿಗದಿದ್ದರೂ ಕೂಲಿ ಕಾರ್ಮಿಕರಾಗಿ ದುಡಿಯುವ ಅವಕಾಶ ನೀಡಬೇಕು ಸಂಸ್ಥೆಯ ಒಳಗಡೆ ಕಾರ್ಮಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದಿರುವ ಬಗ್ಗೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು,ಇಬ್ಬರೂ ಶಾಸಕರೊಂದಿಗೆ ಸ್ಥಳೀಯ ಎಲ್ಲಾ ದೊಡ್ಡ ಕಂಪನಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಚರ್ಚೆಯ ವೇಳೆ ನಿರ್ಧರಿಸಲಾಯಿತು ಮುಂದೆ ಇಂತಹ ಘಟನೆ ನಡೆದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ ಬಳಿಕ ಅಧಿಕಾರಿಗಳು ಸ್ಥಳೀಯರನ್ನು ಕೆಲಸಕ್ಕೆ ಇಡಲು ಒಪ್ಪಿಗೆ ಸೂಚಿಸಿದರು ನಂತರ ಪ್ರತಿಭಟನೆ ಹಿಂಪಡೆಯಲಾಯಿತು ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ವರುಟ್ ಚೌಟ,ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಬಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ್ ಜೋಗಿ,ಸದಸ್ಯ ಪದ್ಮನಾಭ ಸಾಲ್ಯಾನ್, ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ, ಸುರತ್ಕಲ್ ಪೋಲೀಸ್ ಠಾಣಾ ಉಪಠಾಣಾಧಿಕಾರಿ ರಘನಾಯಕ್,ಬಿಜೆಪಿ ಮುಖಂಡರಾದ ಭರತ್ ರಾಜ್ ಕೃಷ್ಣಾಪುರ, ಭಾಸ್ಕರ್ ರಾವ್ ಬಾಳ,ಶಿವಪ್ರಸಾದ್ ಶೆಟ್ಟಿ ಕಿರಣ್ ರೈ ಬಾಳ ಮುಂತಾದವರು ಉಪಸ್ಥಿತರಿದ್ದ
ಸುರತ್ಕಲ್. :ಎಚ್ ಪಿ ಸಿ ಎಲ್ ಅಡುಗೆ ಅನಿಲ ಜಾಡಿ ತುಂಬಿಸುವ ಘಟಕದಲ್ಲಿ ಕಾರ್ಮಿಕರಿಂದ ದಿಢೀರ್ ಮುಷ್ಕರ
RELATED ARTICLES