Wednesday, July 24, 2024
HomeUncategorizedನಿನ್ನೆ ಪ್ರಮಾಣ ವಚನ: ಇಂದು ಸಚಿವ ಸ್ಥಾನಕ್ಕೆ ಸುರೇಶ್‌ ಗೋಪಿ ಗುಡ್‌ ಬೈ?

ನಿನ್ನೆ ಪ್ರಮಾಣ ವಚನ: ಇಂದು ಸಚಿವ ಸ್ಥಾನಕ್ಕೆ ಸುರೇಶ್‌ ಗೋಪಿ ಗುಡ್‌ ಬೈ?

ನವದೆಹಲಿ: ಕೇರಳದಲ್ಲಿ ಬಿಜೆಪಿ ಖಾತೆ ತೆರೆದು ಭಾರೀ ಸುದ್ದಿಯಾದ ಮಲಯಾಳಂ ನಟ ಸುರೇಶ್‌ ಗೋಪಿ, ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿಯೂ ಸೇರ್ಪಡೆಗೊಂಡಿದ್ದಾರೆ. ಇದೀಗ ಭಾನುವಾರ ಸಂಜೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿರುವ ಸುರೇಶ್‌ ಗೋಪಿ, ಸಚಿವ ಸಂಪುಟದ ಖಾತೆ ಹಂಚಿಕೆಗೆ ಮೊದಲೇ ಸಚಿವ ಸ್ಥಾನ ತ್ಯಜಿಸಲು ತೀರ್ಮಾನಿಸಿರುವುದಾಗಿ ವರದಿಗಳಾಗಿವೆ.
ನನಗೆ ಸಚಿವನಾಗುವುದಕ್ಕೆ ಇಷ್ಟವಿಲ್ಲ. ನಾನು ಚಿತ್ರರಂಗದಲ್ಲಿ ಮುಂದುವರಿಯಲ ಇಚ್ಚಿಸುತ್ತೇನೆ. ಹೀಗಾಗಿ ಸಂಪುಟದಿಂದ ನನ್ನನ್ನು ಕೈಬಿಡುವಂತೆ ಹೈಕಮಾಂಡ್‌ ಬಳಿ ಇಂಗಿತ ವ್ಯಕ್ತಪಡಿಸಿದ್ದೇನೆ ಎಂದು ಸುರೇಶ್‌ ತಿಳಿಸಿದ್ದಾರೆ.
ಸುರೇಶ್‌ ಗೋಪಿ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಗಳಾಗಿದ್ದವು. ಆದರೆ ಇದು ಊಹಾಪೋಹವಷ್ಟೇ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ರಾಜೀನಾಮೆ ನೀಡುವ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ. ಸುರೇಶ್‌ ಗೋಪಿ ಹೇಳಿಕೆ ಕುರಿತು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

RELATED ARTICLES
- Advertisment -
Google search engine

Most Popular