Thursday, December 5, 2024
Homeಮೂಡುಬಿದಿರೆಮೂಡುಬಿದಿರೆ | ಸೃಷ್ಟಿ ಹೋಟೆಲ್‌, ಮಲ್ಟಿಪರ್ಪಸ್‌ ಹಾಲ್ ಮಾಲಕ ಸುರೇಶ್‌ ಶೆಟ್ಟಿ ನಿಧನ

ಮೂಡುಬಿದಿರೆ | ಸೃಷ್ಟಿ ಹೋಟೆಲ್‌, ಮಲ್ಟಿಪರ್ಪಸ್‌ ಹಾಲ್ ಮಾಲಕ ಸುರೇಶ್‌ ಶೆಟ್ಟಿ ನಿಧನ

ಮೂಡುಬಿದಿರೆ: ಇಲ್ಲಿನ ಅಲಂಗಾರು ಸೃಷ್ಟಿ ಹೋಟೆಲ್‌, ಕಡಲಕೆರೆ ಸೃಷ್ಟಿ ಮಲ್ಟಿ ಪರ್ಪಸ್‌ ಹಾಲ್‌ನ ಮಾಲಕ ಸುರೇಶ್‌ ಶೆಟ್ಡಿ ನಿಧನರಾಗಿದ್ದಾರೆ. ಅಲಂಗಾರು ಬಂಗೇರಬೆಟ್ಟು ನಿವಾಸಿಯಾಗಿದ್ದ ಇವರು ಪತ್ನಿ, ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಕೆಲವು ದಿನಗಳ ಹಿಂದೆ ಅಸೌಖ್ಯಕ್ಕೊಳಗಾಗಿದ್ದ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಲಂಗಾರ್‌ನಲ್ಲಿ ವರ್ತಕರು ಅಂಗಡಿಗಳನ್ನು ಬಂದ್‌ ಮಾಡಿ ಸಂತಾಪ ಸೂಚಿಸಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ, ಬಿಜೆಪಿ ಮುಖಂಡ ಸುದರ್ಶನ್‌ ಎಂ. ಮತ್ತು ಪ್ರಮುಖರು ಸಂತಾಪ ಸೂಚಿಸಿದ್ದಾರೆ.

RELATED ARTICLES
- Advertisment -
Google search engine

Most Popular