ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮಹಿಳಾ ಘಟಕ ಉಡುಪಿ ಜಿಲ್ಲೆ, ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ತೋಟದ ಮನೆ ಕೊಡವೂರು, ಎ.ಪಿ.ಎಂ.ಸಿ ರಕ್ಷಣಾ ಸಮಿತಿ ಉಡುಪಿ ಜಂಟಿ ಆಶ್ರಯದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಂಪ್ರದಾಯಕ ಗೂಡು ದೀಪ ಸ್ಪರ್ಧೆ ಶಿ ಸಾಯಿಬಾಬಾ ಮಂದಿರ ತೋಟದ ಮನೆ ಕೊಡವೂರು ಇಲ್ಲಿ ದಿನಾಂಕ 27-10-2024 ರಂದು ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಎ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ, ಸಾಂಪ್ರದಾಯಕ ಗೂಡು ಸ್ಪರ್ಧೆಯು ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುತ್ತದೆ. ಎಲ್ಲಾರೂ ದೀಪಾವಳಿ ಹಬ್ಬವನ್ನು ಒಳ್ಳೆಯ ರೀತಿಯಲ್ಲಿ ಆಚರಿಸೋಣ. ಹಿಂದೂ ಧರ್ಮವನ್ನು ಆಚರಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಶ್ರೀ ಕೆ ವಿಜಯ್ ಕೊಡವೂರು ಮಾತನಾಡಿ ಸಾಂಪ್ರದಾಯಕ ಗೂಡು ದೀಪಗಳನ್ನು ಉಳಿಸುವುದರ ಜೊತೆ ಜೊತೆಯಲ್ಲಿ ನಮ್ಮ ಧರ್ಮ,ಸಂಸ್ಕೃತಿ, ಸಂಸ್ಕಾರ ಹಾಗೂ ಹಿರಿಯರು ತೋರಿಸಿಕೊಟ್ಟಂತ ದಾರಿಯನ್ನು ಉಳಿಸುವ ಅವಶ್ಯಕತೆ ಇದೆ. ಹಿಂದುತ್ವದ ಅನೇಕ ಆಚಾರ ವಿಚಾರಗಳನ್ನು ಬಿಟ್ಟು ಹಿಂದೆ ಸರಿಯುತಿದ್ದೇವೆ ಅದರಿಂದ ಇನ್ನು ಮುಂದಿನ ದಿನಗಳಲ್ಲಿ ಹಬ್ಬ ಆಚರಿಸುವ ಜೊತೆ ಜೊತೆಯಲ್ಲಿ ಧರ್ಮ ರಕ್ಷಣೆಯನ್ನು ಮಾಡುವ ಅವಶ್ಯಕತೆ ಇದೆ. ನಾವು ಧರ್ಮ ರಕ್ಷಣೆಯನ್ನು ಮಾಡಿದರೆ ಮಾತ್ರ ಪವಿತ್ರವಾದ ಹಿಂದೂ ಧರ್ಮದ ಸಂಸ್ಕಾರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಧ್ಯವಿದೆ.
ಇಲ್ಲದಿದ್ದಲ್ಲಿ ಹಿಂದೂ ಧರ್ಮಕ್ಕೆ ತೊಂದರೆಯನ್ನು ಕೊಡುವಂತಹ ಅನೇಕ ದುಷ್ಟ ಶಕ್ತಿಗಳು ನಮ್ಮ ಜೊತೆ ಇದೆ ಆದ್ದರಿಂದ ಯಾರೆಲ್ಲ ದೇವರನ್ನು ನಂಬುತ್ತಾರೆ, ಯಾರೆಲ್ಲ ಹಿಂದು ದೇವರನ್ನು ಪೂಜೆ ಮಾಡುತ್ತಾರೆ ಆರಾಧಿಸುತ್ತಾರೆ ಈ ಸಂಸ್ಕೃತಿಗೆ ಸಂಸ್ಕಾರಕ್ಕೆ ಗೌರವ ಕೊಡುತ್ತಾರೆ ಅವರ ಜೊತೆ ಮಾತ್ರ ನಾವು ವ್ಯಾಪಾರ ಮಾಡೋಣ ಉಳಿದವರ ಜೊತೆಯಲ್ಲಿ ವ್ಯಾಪಾರ ಮಾಡಿದರೆ ಅದು ನಮ್ಮ ಧರ್ಮಕ್ಕೆ ಕಂಟಕ ಬರಲು ಸಾಧ್ಯವೇ ಇದೆ ಎಂದು ಈ ಸಂದರ್ಭದಲ್ಲಿ ವಿಜಯ್ ಕೊಡವೂರು ತಿಳಿಸಿದರು.