ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡ ಬಳಿಕ ಏ. 17ರಂದು ಮೊದಲ ಬಾರಿ ರಾಮ ನವಮಿ ಆಚರಿಸಲಾಗುತ್ತದೆ. ಈ ವೇಳೆ ಗರ್ಭ ಗುಡಿಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ಹಣೆಗೆ ರಾಮನವಮಿಯ ದಿನದಂದು ಸೂರ್ಯನ ಕಿರಣ ಮುತ್ತಿಕ್ಕುವ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ. ಬಾಲರಾಮನ ಹಣೆಗೆ ಅಂದು ಸೂರ್ಯನ ಕಿರಣಗಳು ಮುತ್ತಿಕ್ಕಲಿವೆ. ಆ ದಿನ ಸೂರ್ಯನ ಕಿರಣಗಳು ಬಾಲರಾಮನ ಹಣೆಗೆ ಮುತ್ತಿಕ್ಕುವಂತೆ ದೇವಳದ ಗರ್ಭಗುಡಿಯನ್ನು ವಿನ್ಯಾಸಗೊಳಿಸಲಾಗಿದೆ.
ಮಧ್ಯಾಹ್ನ 12ಕ್ಕೆ ಸರಿಯಾಗಿ ಸೂರ್ಯನ ಕಿರಣ ಬಾಲರಾಮನ ಹಣೆಗೆ ಮುತ್ತಿಕ್ಕುವಂತೆ ವಿನ್ಯಾಸಗೊಳಿಸಲಾಗಿದೆ. 75 ಮಿ ಮೀ ಗಾತ್ರದ ಸೂರ್ಯ ತಿಲಕ ನಾಲ್ಕು ನಿಮಿಷ ರಾಮನ ಹಣೆಯ ಮೇಲಿರಲಿದೆ. ನಂತರ ಅದು ಸರಿಯಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.