Wednesday, January 15, 2025
Homeಕಾರ್ಕಳಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದಿಂದ ಸುಶಾಸನ ದಿನಾಚರಣೆ ಹಾಗೂ ಯೋಗ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದಿಂದ ಸುಶಾಸನ ದಿನಾಚರಣೆ ಹಾಗೂ ಯೋಗ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ಕಾರ್ಕಳ: ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಬುಧವಾರ ಬೆಳಿಗ್ಗೆ ಸುಶಾಸನ ದಿನ, ಯೋಗ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಕಳ ಶಾಸಕರ ಜನಸೇವಾ ಕಛೇರಿಯಲ್ಲಿ ಶ್ರದ್ಧೇಯ ಅಟಲ್‌ ಬಿಹಾರಿ ವಾಜಪೇಯಿಯವರ ಜಯಂತಿಯ ಅಂಗವಾಗಿ ಕಾರ್ಕಳ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ವಿ ಸುನಿಲ್‌ ಕುಮಾರ್‌ ರವರು ಗೌರವಾನ್ವಿತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಥಾಯ್ಲೆಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ನಮ್ಮ ಮಹಿಳಾ ಮೋರ್ಚಾ ಸದಸ್ಯೆಯಾದ ಯರ್ಲಪಾಡಿಯ ಕು.ಸುಷ್ಮಾ ತೆಂಡೂಲ್ಕರ್‌ ಹಾಗೂ ಹೆರ್ಮುಂಡೆಯ ಮೊತ್ತೊರ್ವ ಯೋಗಪಟು ಕು.ಅನನ್ಯ ಇವರಿಗೆ ಮಹಿಳಾ ಮೋರ್ಚಾ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಜೇಶ್‌ ರೆಂಜಾಳ, ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಿನಯ ಡಿ ಬಂಗೇರ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವಿನುತಾ ಆಚಾರ್ಯ ಹಾಗೂ ಶ್ರೀಮತಿ ಸುಮಾ ರವಿಕಾಂತ್, ಕೋಶಾಧಿಕಾರಿ ಸುಚಿತ್ರಾ ಶೆಟ್ಟಿ, ಪದಾಧಿಕಾರಿಗಳಾದ ಭಾರತಿ ಅಮೀನ್‌, ನೀತಾ ಆಚಾರ್ಯ, ಶ್ರೀಮತಿ ಶಶಿಮಣಿ, ಶ್ರೀಮತಿ ಚಂದ್ರಿಕಾ ರಾವ್‌, ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀಮತಿ ಸುಮಾ ಕೇಶವ್‌, ಮಾಜಿ ತಾಪಂ ಸದಸ್ಯರಾದ ಶ್ರೀಮತಿ ಮಂಜುಳಾ, ಮರ್ಣೆ ಗ್ರಾಪಂ ಮಾಜಿ ಅಧ್ಯಕ್ಷಾರಾದ ಶ್ರೀಮತಿ ಸುಶೀಲಾ ಪೂಜಾರ್ತಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿನಯ ಡಿ. ಬಂಗೇರ
ಅಧ್ಯಕ್ಷರು, ಮಹಿಳಾ ಮೋರ್ಚಾ ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ

RELATED ARTICLES
- Advertisment -
Google search engine

Most Popular