Wednesday, February 19, 2025
Homeಬೆಂಗಳೂರುಐಟಿಸಿ ಬಂಗಾರದ ಭವಿಷ್ಯದೆಡೆಗೆ ಕಾರ್ಯಕ್ರಮದಡಿಯಲ್ಲಿ 'ಮಹಿಳಾ ಪ್ಲಂಬರ್’ಗಳಿಗೆ ಸುಸ್ಥಿರ ನೀರು ನಿರ್ವಹಣೆ ಮತ್ತು ಮಳೆ ನೀರು...

ಐಟಿಸಿ ಬಂಗಾರದ ಭವಿಷ್ಯದೆಡೆಗೆ ಕಾರ್ಯಕ್ರಮದಡಿಯಲ್ಲಿ ‘ಮಹಿಳಾ ಪ್ಲಂಬರ್’ಗಳಿಗೆ ಸುಸ್ಥಿರ ನೀರು ನಿರ್ವಹಣೆ ಮತ್ತು ಮಳೆ ನೀರು ಕೊಯ್ಲು ಕಾರ್ಯಾಗಾರ’

ಐಟಿಸಿ ಲಿಮಿಟೆಡ್ ತನ್ನ ಸಾಮಾಜಿಕ ಹೂಡಿಕೆ ವಿಭಾಗವಾದ ಐಟಿಸಿ ಮಿಷನ್ ಸುನೆಹ್ರಾ ಕಲ್’ ನಡಿಯಲ್ಲಿ ಅದರ ಪಾಲುದಾರ ಎನ್‌ಜಿಒ ಬಯೋಮ್ ಎನ್ವಿರಾನ್‌ಮೆಂಟಲ್ ಟ್ರಸ್ಟ್ ಜೊತೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಯಲಹಂಕ ತಾಲೂಕು ಪಂಚಾಯತ್ , ಜಲ ಜೀವನ್ ಮಿಷನ್ ಮತ್ತು ಡಾ ನೆಲ್ಸನ್ ಮಂಡೇಲಾ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಸಹಯೋಗದೊಂದಿಗೆ ಮಹಿಳಾ ಪ್ಲಂಬರ್‌ಗಳಿಗೆ ಸುಸ್ಥಿರ ನೀರು ನಿರ್ವಹಣೆ ಮತ್ತು ಮಳೆನೀರು ಕೊಯ್ಲು ಕಾರ್ಯಾಗಾರವನ್ನು ಜನವರಿ 20, 2025’ ರಂದು ಯಲಹಂಕ ತಾಲೂಕು ಪಂಚಾಯತಿಯಲ್ಲಿ ಆಯೋಜಿಸಿತ್ತು. ಯಲಹಂಕ ಮತ್ತು ಬೆಂಗಳೂರು ಉತ್ತರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ತಲಾ 2, ಒಟ್ಟು 58 ಮಹಿಳಾ ಪ್ಲಂಬರ್‌ಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಈ ಹಿಂದೆ ಮಹಿಳೆಯ ಸಬಲೀಕರಣಕ್ಕಾಗಿ ನಲ್ ಜಲ ಮಿತ್ರ ಯೋಜನೆಯಡಿ ಐಟಿಐನಲ್ಲಿ 14 ದಿನಗಳ ಕಾಲ ಈ ಮಹಿಳೆಯರಿಗೆ ಪ್ಲಂಬರ್ ತರಬೇತಿ ನೀಡಲಾಗಿತ್ತು.

ಯಲಹಂಕ ಮತ್ತು ದೇವನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಐಟಿಸಿ ಬಂಗಾರದ ಭವಿಸ್ಯದೆಡೆಗೆ ಅಡಿಯಲ್ಲಿ ನೀರಿನ ನಿರ್ವಹಣೆ ಮತ್ತು ಸುಸ್ಥಿರತೆಯನ್ನು ಕಾಪಾಡಲು ಬೆಂಬಲಿಸುತ್ತಿದೆ. ಇದರ ಭಾಗವಾಗಿ ಈಗಾಗಲೇ ನೂರಾರು ಪ್ಲಂಬರ್’ ಮತ್ತು ವಾಟರ್ ಮೆನ್ ಗಳಿಗೆ ಮಳೆ ನೀರು ಕೊಯ್ಲು ಹಾಗೂ ನೀರಿನ ನಿರ್ವಣೆ ಬಗ್ಗೆ ತರಬೇತಿಗಳನ್ನು ನೀಡಲಾಗಿದೆ. ಈ ಕಾರ್ಯದ ಮುಂದುವರಿದ ಭಾಗವಾಗಿ ಪ್ರಸ್ತುತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎಸ್. ಲತಾ ಕುಮಾರಿ (ಭಾ.ಆ. ಸೇ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಪಂಚಾಯತಿ ರವರು ವಹಿಸಿದ್ದರು. ವೇದಿಕೆಯ ಮೇಲೆ ಇತರ ಮುಖ್ಯ ಅತಿಥಿಗಳಾಗಿ ಶ್ರೀ.ಪುರುಷೋತ್ತಮ, ಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ವಿಭಾಗ, ಡಾ|| ಪ್ರಮೋದ್ ಯೋಜನಾ ಅಧಿಕಾರಿ ಬೆಂಗಳೂರು ನಗರ ಜಿಲ್ಲೆ, ಶ್ರೀಮತಿ ಅಪೂರ್ವ ಕುಲಕರ್ಣಿ ಕಾರ್ಯನಿರ್ವಾಹಕ ಅಧಿಕಾರಿ ಯಲಹಂಕ ತಾಲ್ಲೂಕ್ ಪಂಚಾಯತ್ ಬೆಂಗಳೂರು ನಗರ ಜಿಲ್ಲೆ, ಜೋಸೆಫ್ ಕಾರ್ಯನಿರ್ವಾಹಕ ಅಧಿಕಾರಿ ಬೆಂಗಳೂರು ಉತ್ತರ ತಾಲೂಕು ಪಂಚಾಯತಿ ಬೆಂಗಳೂರು ನಗರ ಜಿಲ್ಲೆ, ರಂಜಿತಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉತ್ತರ RDWSD ಉಪವಿಭಾಗ ಬೆಂಗಳೂರು ನಗರ ವಿಭಾಗ , ಉಷಾ, ಜಿಲ್ಲಾ ಯೋಜನಾ ವ್ಯವಸ್ಥಾಪಕರುು, ಜಲ ಜೀವನ ಮಿಷನ್ ಶಿವಾನಂದ್ ಕಾರ್ಯಕ್ರಮ ಸಂಯೋಜಕರು ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ ರವರು ಉಪಸ್ಥಿತರಿದ್ದರು.

ಕೆ.ಎಸ್.ಲತಾ ಕುಮಾರಿ (ಐಎಎಸ್) ಮಾತನಾಡಿ, ಗ್ರಾಮ ಪಂಚಾಯಿತಿಯ ಮೊದಲ ಬ್ಯಾಚ್ ಮಹಿಳಾ ಪ್ಲಂಬರ್ ನಿಜವಾದ ಸಬಲೀಕರಣವಾಗಿದೆ ಮತ್ತು ಭಾಗವಹಿಸುವವರು ತರಬೇತಿ ಕಿಟ್‌ಗಳು ಮತ್ತು ಸಂಪನ್ಮೂಲ ಸಾಮಗ್ರಿಗಳನ್ನು ಬಳಸಿಕೊಂಡು ಸುಸ್ಥಿರ ನೀರು ನಿರ್ವಹಣೆಯ ರಾಯಭಾರಿಗಳಾಗಬೇಕೆಂದರು.

ಉಷಾ ಅವರು ಮಹಿಳಾ ಪ್ಲಂಬರ್‌ಗಳ ಪಾತ್ರ ಮತ್ತು ಭವಿಷ್ಯದಲ್ಲಿ ಮಹಿಳಾ ಪ್ಲಂಬರ್‌ಗಳಿಗೆ ಸಿಗಬಹುದಾದ ಅವಕಾಶಗಳ ವಿವರಗಳನ್ನು ನೀಡಿದರು ಮತ್ತು ಅದಕ್ಕಾಗಿ ಸಿದ್ಧರಾಗಿರಲು ಹೇಳಿದರು.

ಬಯೋಮ್ ಟ್ರಸ್ಟ್‌ನ ಶಿವಾನಂದ ಆರ್.ಎಸ್ ಅವರು ನೀರಿನ ಬೇಡಿಕೆ ನಿರ್ವಹಣೆ, ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ತ್ಯಾಜ್ಯ ನೀರು ನಿರ್ವಹಣೆ, ನೀರು ಸರಬರಾಜಿಗೆೆ ಮೇಲ್ಸ್ತರದ ಅಂತರ್ಜಲವನ್ನು ಸಂಯೋಜಿಸುವುದು ಇತ್ಯಾದಿ ಮೇಲಿನ ವಿಷಯಗಳಲ್ಲಿ ಮಹಿಳಾ ಪ್ಲಂಬರ್‌ಗಳ ಪಾತ್ರವನ್ನು ಒಳಗೊಂಡ ಸುಸ್ಥಿರ ನೀರು ನಿರ್ವಹಣೆ ಬಗ್ಗೆ ಮಾತನಾಡಿದರು.

ಪ್ಲಂಬರ್’ ಗಳಿಗೆ ತಮ್ಮ ದೈನಂದಿನ ಕೆಲಸದಲ್ಲಿ ಸಹಾಯ ಮಾಡುವ ಪರಿಕರಗಳ ಕಿಟ್, ಭಾಗವಹಿಸುವಿಕೆ ಪ್ರಮಾಣಪತ್ರ ಮತ್ತು ಸುಸ್ಥಿರ ನೀರು ನಿರ್ವಹಣೆಗೆ ಸಂಬಂಧಿಸಿದ 6 ಕನ್ನಡ ಕಿರು ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ, ಶಿಬಿರಾರ್ಥಿ ಕೌಶಲ್ಯ ಮಾತನಾಡಿ ‘ ಬೆಳಿಗ್ಗೆ ಎದ್ದ ತಕ್ಷಣ ಪಾತ್ರೆ ತೊಳೆಯುವವರು ನಾವೇ, ನೀರು ಹಾಕುವುದು ನಾ ವೇ, ಎಲ್ಲಾ ಮನೆಗೆಲಸ ಮಾಡುವವರು ಹೆಂಗಸರೇ. ನೀರಿನ ಬೆಲೆ ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು. ನಮ್ಮ ಪೂರ್ವಿಕರೆಲ್ಲ ನೀರನ್ನು ದೂರದ ಬಾವಿಯಿಂದ ತರುತ್ತಿದ್ದರು. ನಮಗೋ ಕೂಡ ನೀರಿನ ಭಾವನೆ ಇದೆ . ಆ ಕಷ್ಟ ಬೇಡ ಎಂದು ಈಗ ಎಲ್ಲರ ಮನೆಗೋ JJM ನಿಂದ ನೀರಿನ ಸಂಪರ್ಕ ಕಲ್ಪಿಸುತ್ತಿದ್ದಾರೆ. . ಮಿತವಾಗಿ ಶುದ್ಧ ನೀರು ಬಳಸಲೆಂದು ಮೀಟರ್ ಅಳವಡಿಸತ್ತಿದ್ದಾರೆ ‘ ಎಂದು ಹೇಳಿದರು. ಇನ್ನೋರ್ವ ಶಿಬಿರಾರ್ಥಿ ರಾಧ ಮಾತನಾಡಿ ‘JJM ಇದೊಂದು ಕೇಂದ್ರದ ಯೋಜನೆ, ಇದರ ಉದ್ದೇಶ ಮನೆ ಮನೆಗೋ ಶುದ್ಧವಾದ ನೀರು ಕೊಡುವುದು. ಜೊತೆಗೆ ತರಬೇತಿಯ ಉದ್ದೇಶ ಮಹಿಳೆಯರಿಗೆ ಆದ್ಯತೆ ಕೊಟ್ಟು ಅವರು ಮುಂದೆ ಬರಬೇಕು ಎನ್ನುವ ಆಶಯದೊಂದಿಗೆ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು’ ಎಂದರು.

ಎಲ್ಲರೂ ಬಯೋಮ್ ಸಂಸ್ಥೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ‘ನೀರಿನ ನಿರ್ವಹಣೆ ಮತ್ತು ಮಳೆ ಕೊಯ್ಲು’ ಮಾಡೆಲ್ ಮತ್ತು ಸುಸ್ಥಿರ ನೀರು ನಿರ್ವಹಣೆಗೆ ಸಂಬಂಧಿಸಿದ ಸ್ಟ್ಯಾಂಡೇಸ್, ಪೋಸ್ಟರ್’ಗಳನ್ನು ವೀಕ್ಷಿಸಿ ಉಪಯುಕ್ತ ಮಾಹಿತಿ ಪಡೆದರು

RELATED ARTICLES
- Advertisment -
Google search engine

Most Popular