ಮೂಡುಬಿದಿರೆ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ʻಸ್ವಚ್ಛತಾ ಹೀ ಸೇವಾ ಆಂದೋಲನ್’ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ʻಸ್ವಚ್ಚತೆಯೆಡೆಗೆ ದಿಟ್ಟ ಹೆಜ್ಜೆ’ ಅಭಿಯಾನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಡಿತ್ ರೆಸಾರ್ಟ್ ಬಳಿ ನಡೆಯಿತು.
ನಾವು ಸ್ವಚ್ಛತೆ ಪಾಲನೆ ಮಾಡಿದರೆ, ಆರೋಗ್ಯದ ದೃಷ್ಠಿಯಿಂದಲೂ ಒಳ್ಳೆಯದು. ಗ್ರಾಮಸ್ಥರೆಲ್ಲರು ಸಹಕಾರ ನೀಡಿ ತಮ್ಮ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂದು ಪಡುಮಾರ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ ಹೇಳಿದರು.
ಇದೇ ವೇಳೆ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕುಸುಮಾಧರ್ ಬಿ., ಸ್ವಚ್ಛತಾ ಆಂದೋಲನವು ಪ್ರತಿ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಅಕ್ಟೋಬರ್ 2ರವರೆಗೆ ನಿರಂತರ ವಿಶೇಷ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದ್ದು, ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಗಳು ನಡೆಯುತ್ತಿದೆ. ಸಮುದಾಯದ ಆರೋಗ್ಯ ದೃಷ್ಟಿಯಿಂದ ಹಾಗೂ ಪರಿಸರದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಒಂದು ಕರ್ತವ್ಯವನ್ನು ಕೇವಲ ಅಧಿಕಾರಿಗಳು, ಜನಪ್ರತಿನಿಧಿಗಳು ವಿದ್ಯಾರ್ಥಿಗಳು ಮಾತ್ರವಲ್ಲದೆ, ಜನಸಾಮಾನ್ಯರು ಕೂಡ ತಮ್ಮ ಜವಾಬ್ದಾರಿಯಂತೆ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಪ್ಪಿಸಿ, ಸ್ವಚ್ಛತೆ ಕಾಪಾಡಬೇಕು ಎಂದರು.
ಪಂಡಿತ್ ರೆಸಾರ್ಟ್ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ದಾರಿಯುದ್ದಕ್ಕೂ ಅಧಿಕಾರಿಗಳು, ಸಿಬ್ಬಂದಿವರ್ಗದವರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ಬನ್ನಡ್ಕದ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿ, ಕಸವನ್ನು ತೆಗೆದು ಸ್ವಚ್ಚಗೊಳಿಸಿದರು. ಸ್ವಚ್ಛತಾ ಸಿಬ್ಬಂದಿ ಕಸದ ಚೀಲಗಳನ್ನು ವಾಹನದಲ್ಲಿ ತುಂಬಿ ಸಹಕರಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಸಾಯಿಷ್ ಚೌಟ ಅವರು ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಕಲ್ಯಾಣಿ, ರಮೇಶ್ ಶೆಟ್ಟಿ, ಮಹಮ್ಮದ್ ಅಸ್ಲಾಮ್, ರಜನಿ, ಕುಸುಮಾ, ಟೆಸ್ಲಿನಾ, ಮಾಜಿ ಸದಸ್ಯರಾದ ದಯಾನಂದ ಪೈ, ತಾಲೂಕು ಐಇಸಿ ಸಂಯೋಜಕರಾದ ಅನ್ವಯ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ರಾಜು, ಕಿಶೋರ್, ಪ್ರಕಾಶ್, ಪಂಚಾಯತ್ ಗೃಂಥಾಲಯ ಮೇಲ್ವೀಚಾರಕರಾದ ವನಿತಾ, ಸ್ವಚ್ಚತಾ ಸಿಬ್ಬಂದಿಗಳಾದ ಶ್ವೇತಾ, ಮಲ್ಲಿಕಾ, ಅಂಗನವಾಡಿ ಶಿಕ್ಷಕಿ ಶಾಹಿನ್ ಕೌಸರ್, ಕಾಲೇಜಿನ ಎನ್ ಎಸ್ ಎಸ್ ಶಿಕ್ಷಕರಾದ ರವಿರಾಜ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪಡುಮಾರ್ನಾಡು | ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಅಭಿಯಾನ; ಪಂಡಿತ್ ರೆಸಾರ್ಟ್ ಬಳಿ ಸ್ವಚ್ಛತೆ
RELATED ARTICLES