ಭಾರತ ಸರಕಾರ,ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,
ನೆಹರು ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು,ಗ್ರಾಮ ಪಂಚಾಯತ್ ಪಡುಪಣಂಬೂರು,ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ,ದ.ಕ ಜಿಲ್ಲೆ ಇವರುಗಳ ಮಾರ್ಗದರ್ಶನದಲ್ಲಿ ಮೂಲ್ಕಿ ಅರಮನೆ ಇವರ ಸಹಕಾರದೊಂದಿಗೆ,ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ ಕ್ಲಬ್ (ರಿ), ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಮೂಲ್ಕಿ (ಪಡುಪಣಂಬೂರು)ಅರಸು ಕಂಬಳದ ಪೂರ್ವ ಭಾವಿಯಾಗಿ ಅರಮನೆಯ ವಠಾರದಲ್ಲಿ ದಿನಾಂಕ 03/11/2024 ನೇ ರವಿವಾರ ಬೆಳಿಗ್ಗೆ ಘಂಟೆ 7.30 ರಿಂದ 9.30 ರ ತನಕ ಸಂಸ್ಥೆಯ ಸದಸ್ಯರು ಮತ್ತು ಸದಸ್ಯೆಯರಿಂದ ಸ್ವಚ್ಛತಾ ಶ್ರಮದಾನ ನೆರವೇರಿತು.
▪️ ಸ್ವಚ್ಛತಾ ಕಾರ್ಯದಲ್ಲಿ ಮೂಲ್ಕಿ ಅರಮನೆಯ ಸೀಮೆ ಅರಸರಾದ ಶ್ರೀ ಎಂ.ದುಗ್ಗಣ ಸಾವಂತರು ಸ್ವಚ್ಛತೆಗೆ ಚಾಲನೆ ನೀಡಿ ಮಾತನಾಡಿ,ನಮ್ಮ ಮತ್ತು ಮುಂದಿನ ಪೀಳಿಗೆಯ ಮಕ್ಕಳ ಆರೋಗ್ಯ ಉತ್ತಮವಾಗಿರ ಬೇಕಾದರೆ ಪ್ರತಿಯೊಬ್ಬರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಅಗತ್ಯವಾಗಿದೆ.ಪ್ಲಾಸ್ಟಿಕ್ ತ್ಯಾಜ್ಯ, ಕಸ – ಕಡ್ಡಿ ಸಂಪೂರ್ಣವಾಗಿ ತೊಲಗಿಸಿ ಹಸಿರುಮಯ ವಾತಾವರಣ ನಿರ್ಮಿಸಬೇಕು ಎಂದು ಅಭಿಪ್ರಾಯ ಪಟ್ಟರು.
▪️ಈ ಸಂದರ್ಭದಲ್ಲಿ ಮುಲ್ಕಿ ಅರಮನೆಯ ಆಶಾಲತಾ , ಗೌತಮ್ ಜೈನ್, ನಿವೇದಿತಾ ಉಪಸ್ಥಿತರಿದ್ದರು.
▪️ಸ್ವಚ್ಛತಾ ಕಾರ್ಯದಲ್ಲಿ ನಿವೃತ್ತ ಯೋಧರಾದ ಲೀಲಾಧರ ಕಡಂಬೋಡಿ, ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ವಿನೋದ್ ಕುಮಾರ್ ಬೆಳ್ಳಾಯರು, ಸಂತೋಷ್ ಕುಮಾರ್,
ಕ್ಲಬ್ ನ ಗೌರವಾಧ್ಯಕ್ಷರಾದ ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷರಾದ ದೀಪಕ್ ಸುವರ್ಣ,ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ,ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ,ಕೋಶಾಧಿಕಾರಿ ಸುನೀಲ್ ಜಿ.ದೇವಾಡಿಗ,ಜೊತೆ ಕಾರ್ಯದರ್ಶಿ ಚಂದ್ರ ಸುವರ್ಣ,ಪರಿಸರ ಸಂರಕ್ಷಣಾ ಕಾರ್ಯದರ್ಶಿ ಚಂದ್ರಶೇಖರ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಯಶೋಧ ದೇವಾಡಿಗ,ಮಾಜಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಶ ಜಗದೀಶ್ ಕುಲಾಲ್,ಸದಸ್ಯರಾದ ಧರ್ಮನಂದ ಶೆಟ್ಟಿಗಾರ್, ಗಣೇಶ್ ದೇವಾಡಿಗ, ಗೌತಮ್ ಬೆಲ್ಚಡ, ಶ್ರ ಮೇಶ್ ಕರ್ಕೇರ, ದಯಾನಂದ ಕೋಟ್ಯಾನ್, ಪಾಂಡರಂಗ, ರ ಬಾಲಕೃಷ್ಣ , ಪದ್ಮನಾಭ ಕುಲಾಲ್, ವಿಜಯ ಆಚಾರ್ಯ ಮಾ|ಆಯುಷ್,
▪️ಸದಸ್ಯೆಯರಾದ ಸರಿತಾ, ಗೀತಾ, ಶರ್ಮಿಳಾ, ಗೀತಾ ದೇವಾಡಿಗ, ಶೋಭಾ ಕುಲಾಲ್, |ಶಿವಾನಿ, ಕಾವ್ಯ, ದೀಕ್ಷಾ ಮತ್ತಿತರರು ಪಾಲ್ಗೊಂಡಿದ್ದರು.
▪️ ಗಣೇಶ್ ದೇವಾಡಿಗ ಪಂಜ, ಮಿಥುನ್, ಸತೀಶ್, ಕುಶಾಲ,ಸ್ವಚ್ಛತಾ ಶ್ರಮದಾನಕ್ಕೆ ಸಹಕರಿಸಿದರು.