Thursday, May 1, 2025
HomeUncategorizedಕರ್ನಾಟಕದ ಅತೀ ದೊಡ್ಡ ಹಾಗೂ ವಿಭಿನ್ನ ರೀತಿಯ ಸ್ವದೇಶಿ ಉತ್ಪನ್ನಗಳ ಆನ್ಲೈನ್ ಮಾರುಕಟ್ಟೆಯಾಗಿ ಬೆಳೆಯುತ್ತಿರುವ “ಸ್ವದೇಶಿ...

ಕರ್ನಾಟಕದ ಅತೀ ದೊಡ್ಡ ಹಾಗೂ ವಿಭಿನ್ನ ರೀತಿಯ ಸ್ವದೇಶಿ ಉತ್ಪನ್ನಗಳ ಆನ್ಲೈನ್ ಮಾರುಕಟ್ಟೆಯಾಗಿ ಬೆಳೆಯುತ್ತಿರುವ “ಸ್ವದೇಶಿ ಮಾರ್ಟ್”

ಮನುಷ್ಯ ಇಂದು ಆಧುನಿಕ ಜೀವಿಯಾಗಿ ಬದುಕುತ್ತಿದ್ದಾನೆ. ಇಡೀ ಜಗತ್ತನ್ನೇ ಯಾಂತ್ರಿಕರಣದತ್ತ ಮುಖ ಮಾಡಿಸಿ ಉಸಿರಾಟವೂ ಕೃತಕವಾಗಿ ಮಾರ್ಪಟ್ಟಿದೆ. ಇಂದು ಮನುಷ್ಯನ ಬೇಕು ಬೇಡಗಳೆಲ್ಲವೂ ಯಂತ್ರಮಯವಾಗಿದೆ. ಪ್ರತಿಯೊಂದಕ್ಕೂ ಆಪ್ ಅಥವಾ ವೆಬ್ಸೈಟ್ ಮೊರೆ ಹೋದರೆ ಬಯಸಿದ್ದೆಲ್ಲ ಅಂಗಳದಲ್ಲಿರುವ ಅಂಗೈಗೆ ಬಂದು ತಲುಪುತ್ತದೆ. ಹಸಿವಾದರೂ ಇಂದು ಅಡುಗೆ ಮಾಡುವ ಪ್ರಮೇಯವೇ ಇಲ್ಲದ ಯುಗವಿದು. ಅವಶ್ಯಕತೆ ಇರುವ ವಸ್ತುವೊಂದು ಬೇಕೆಂದರೆ ಮನೆಯಲ್ಲೇ ಕೂತು ಖರೀದಿಸಬಹುದಾದ ಜಗವಿದು. ಅಮೆಜಾನ್, ಫ್ಲಿಪ್ ಕಾರ್ಟ್, ಮೀಶೊ, ಸ್ವಿಗ್ಗಿ, ಝೊಮೆಟೋ ಹೀಗೆ ಸಾವಿರಾರು ಆನ್ಲೈನ್ ಮಾರುಕಟ್ಟೆಗಳು ಗ್ರಾಹಕರ ಖರೀದಿಗೆ ವೇದಿಕೆಯಾಗುತ್ತಿವೆ. ಈ ಜಾಲತಾಣಗಳಲ್ಲಿ ಏನೇ ವಸ್ತುಗಳನ್ನು ಖರೀದಿಸಿದರೂ ಅದು ಯಾವ ಜಾಗದಲ್ಲಿ ತಯಾರಾಗುತ್ತದೆ ಅಥವಾ ಅವುಗಳ ಗುಣಮಟ್ಟದ ಬಗ್ಗೆ ನಮಗೆ ಸಂಶಯಗಳು ಇದ್ದೇ ಇರುತ್ತದೆ. ಇಂತಹ ಗೊಂದಲಗಳ ನಡುವೆ ಇತ್ತೀಚೆಗೆ ಹುಟ್ಟಿಕೊಂಡಿರುವ, ಸ್ಥಳೀಯ ಹಾಗೂ ಮನೆಯಲ್ಲಿ ಕೈಯಾರೆ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವೇದಿಕೆಯಾಗುತ್ತಿರುವ ವೆಬ್ಸೈಟ್ “ಸ್ವದೇಶಿ ಮಾರ್ಟ್” ವಿಭಿನ್ನವಾಗಿ ಕಾಣುತ್ತಿದೆ.

ಸ್ವದೇಶಿ ಮಾರ್ಟ್ ಎಂಬುದು ಒಂದು ಆನ್ಲೈನ್ ಖರೀದಿ ವೇದಿಕೆ. ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುರ ನಿವಾಸಿ, ಪ್ರಣವ ಭಟ್ ಎಂಬ ಯುವಕನ ಕನಸಿನ ಕೂಸು. ಇವರ ಈ ಕನಸು ಇಂದು ಹಲವಾರು ಹಳ್ಳಿ ಜನರ ಬದುಕಿಗೆ ಬಹುದೊಡ್ಡ ಆಸರೆ ತಾಣವಾಗಿ ಬೆಳೆಯುತ್ತಿದೆ. ವರುಷದ ಹಿಂದೆ ಯುವ ಜನನಾಯಕ ತೇಜಸ್ವಿ ಸೂರ್ಯ ಅವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಸ್ವದೇಶಿ ಮಾರ್ಟ್ ವೆಬ್ಸೈಟ್ ನೂರಾರು ಸ್ವದೇಶಿ ಉತ್ಪನ್ನಗಳಿಗೆ ಆನ್ಲೈನ್ ಶಾಪಿಂಗ್ ವೇದಿಕೆಯಾಗಿದೆ.

ಸ್ವದೇಶಿ ಮಾರ್ಟ್ ವೆಬ್ಸೈಟ್ ಗೆ ಭೇಟಿ ನೀಡಿದರೆ ಅಲ್ಲಿ ಕಾಣಸಿಗುವುದು ಬರಿಯ ಮಾರಾಟ ವಸ್ತುಗಳು ಮಾತ್ರವಲ್ಲ. ಅವೆಷ್ಟೋ ಬಡ ಜನರು ತಮ್ಮ ಪ್ರೀತಿ, ಶ್ರದ್ಧೆ, ಕಾಳಜಿಗಳನ್ನು ಧಾರೆಯೆರೆದು ಉತ್ಪಾದಿಸಿದ ಬದುಕ ಬೆಳಗುವ ಹೊಂಗನಸಿನ ಬತ್ತಿ..!! ಯಾವುದೇ ಸಮಾರಂಭದ ಭೋಜನಕ್ಕೆ ಆದಿಯಾಗುವ ಮನೆಯಲ್ಲೇ ತಯಾರಿಸಿದ ಬಗೆ ಬಗೆಯ ಉಪ್ಪಿನಕಾಯಿ, ಮನೆಯಲ್ಲಿ ತಯಾರಿಸುವ ಶುದ್ಧ ದನದ ತುಪ್ಪ, ಆಯುರ್ವೇದ ಸೋಪು, ಎಣ್ಣೆ ಹೀಗೇ ನಾನಾ ರೀತಿಯ ಉತ್ಪನ್ನಗಳು ಗ್ರಾಹಕರ ಮನ ಗೆಲ್ಲುತ್ತಿವೆ.

ಕಾರ್ಕಳ ತಾಲೂಕಿನ ವಿಜೇತ ವಿಶೇಷ ಶಾಲೆಯ ವಿಶೇಷ ಸಾಮರ್ಥ್ಯವುಳ್ಳ ದೇವರ ಮಕ್ಕಳು ತಯಾರಿಸಿದ ಯಕ್ಷಗಾನ ಸಂಬಂಧಿ ಸ್ಮರಣಿಕೆಗಳು ಸ್ವದೇಶಿ ಮಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ. ಈ ಪ್ರತಿ ಖರೀದಿಯ ಹಣವು ವಿಜೇತ ವಿಶೇಷ ಶಾಲೆಯ ವಿಶೇಷ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗಿ ಬಹುದೊಡ್ಡ ಸಹಾಯವಾಗುತ್ತಿದೆ. ಈಗಾಗಲೇ ಕೆಲವೇ ದಿನಗಳಲ್ಲಿ 150ಕ್ಕೂ ಅಧಿಕ ಯಕ್ಷಗಾನ ಕಿರೀಟದ ಸ್ಮರಣಿಕೆಗಳು ಖರೀದಿಯಾಗಿರುವುದು ಸ್ವದೇಶಿ ಮಾರ್ಟಿಗೆ ಸಂದ ಬಹುದೊಡ್ಡ ಗೌರವವಾಗಿದೆ.

ಹಳ್ಳಿಗಳಲ್ಲಿ ಕೃಷಿಕರು ತಮ್ಮ ದೈನಂದಿನ ಜೀವನವನ್ನು ಹೈನುಗಾರಿಕೆ ಕೃಷಿ ಚಟುವಟಿಕೆ ಮುಂತಾದ ಕೆಲಸಗಳನ್ನು ಮಾಡುತ್ತಾ ಸಾಗಿಸುತ್ತಿರುತ್ತಾರೆ. ಇಂತಹ ರೈತ ವರ್ಗದವರು ತಯಾರಿಸುವ ಹಲ್ವಾಗಳು, ಉಪ್ಪಿನಕಾಯಿ, ತುಪ್ಪ, ತೆಂಗಿನ ಎಣ್ಣೆ, ಗೋ ಉತ್ಪನ್ನಗಳು ಮೊದಲಾದವುಗಳು ಸ್ವದೇಶಿ ಮಾರ್ಟ್ ಮೂಲಕ ಖರೀದಿಸಬಹುದಾಗಿದೆ.

ಅಷ್ಟೇ ಅಲ್ಲದೆ ಪ್ರಸ್ತುತ ದಿನಗಳಲ್ಲಿ ಕೈಮಗ್ಗ ಎಂಬುದು ಕಾಣ ಸಿಗುವುದೇ ಬಹು ಅಪರೂಪ. ಪ್ರತಿಯೊಂದು ಬಟ್ಟೆ ಬರೆಗಳು ಯಂತ್ರದ ಮೂಲಕವೇ ಅತಿ ವೇಗವಾಗಿ ತಯಾರಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ಇನ್ನೂ ಉಸಿರಾಡುತ್ತಿರುವ ಕೈಮಗ್ಗದ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಸ್ವದೇಶಿ ಮಾರ್ಟ್ ಮಾಡುತ್ತಿದೆ. ಪೆರ್ಲದಲ್ಲಿ ಅಳಿವಿನ ಅಂಚಿನಲ್ಲಿರುವ ಕೈಮಗ್ಗದ ಹೊದಿಕೆಗಳು ಸ್ವದೇಶಿ ಮಾರ್ಟ್ ಮೂಲಕ ಮಾರಾಟಕ್ಕಿದೆ. ಒಂದೊಂದು ಬೆಡ್ ಶೀಟ್ ತಯಾರಿಕೆಗೂ ಕೈ ಮಗ್ಗದವರು ತಮ್ಮ ಕಠಿಣ ಪರಿಶ್ರಮವನ್ನು ಹಾಕಿ ಅತಿ ಹೆಚ್ಚು ಸಮಯವನ್ನು ಅದಕ್ಕಾಗಿ ಮೀಸಲಿಟ್ಟಿರುತ್ತಾರೆ. ನಮ್ಮ ಒಂದು ಖರೀದಿ ಅವರ ಕೆಲಸದ ಒತ್ತಡವನ್ನು ಮರೆಸಿ ಮುಖದಲ್ಲೊಂದು ಸಾರ್ಥಕತೆಯ ನಗುವನ್ನು ತರಿಸುತ್ತದೆ.

ಹೊನ್ನಾವರದ ಕೃಷಿಕರೊಬ್ಬರು ಮನೆಯಲ್ಲಿ ಔಷಧೀಯ ಸಸ್ಯಗಳನ್ನು ಬಳಸಿ ತಯಾರಿಸುವ ಸೋಪುಗಳು ಸ್ವದೇಶಿ ಮಾರ್ಟ್ ಅಲ್ಲಿ ಲಭ್ಯವಿದೆ.

ಇತ್ತೀಚಿನ ದಿನಗಳಲ್ಲಿ ವಾರ್ಲಿಯಂತಹ ಅಪರೂಪದ ಚಿತ್ರಕಲೆಗಳು ಕಾಣ ಸಿಗುವುದೇ ಬಹು ವಿರಳ. ಇಂತಹ ಕಲೆಗಾರರು ತಯಾರಿಸುವ ಚಿತ್ರಕಲೆಗಳು ನಮಗೆ ಸ್ವದೇಶಿ ಮಾರ್ಟ್ ನಲ್ಲಿ ಕಾಣಿಸಿಗುತ್ತದೆ.

ಸ್ವದೇಶಿ ಮಾರ್ಟ್ ಮೂಲಕ ಮಾರಾಟಗಾರರು ತಮ್ಮ ಕೈಯಾರೆ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಪ್ರತಿ ವಸ್ತುಗಳು ಸ್ವದೇಶಿ ಉತ್ಪನ್ನಗಳಾಗಿದ್ದು ಮನೆಯಲ್ಲೇ ಕೈಯಾರೆ ತಯಾರಿಸುವಂತಹುದಾಗಿರಬೇಕು. ಸ್ವದೇಶಿ ಮಾರ್ಟ್ ಮೂಲಕ ಗ್ರಾಹಕರು ನೇರವಾಗಿ ತಯಾರಕರ ಜೊತೆ ಮಾತನಾಡಿ ಉತ್ಪನ್ನ ತಯಾರಿಸುವ ಹಿಂದಿನ ಪರಿಶ್ರಮದ ಕುರಿತು ವಿಚಾರಿಸಿ ಖರೀದಿಸುವ ವಿನೂತನ ಅವಕಾಶವನ್ನೂ ನೀಡಲಾಗಿದೆ. Vocal for local ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿರುವ Swadeshi mart ವೆಬ್ಸೈಟ್ ಗೆ ಎಲ್ಲರ ಬೆಂಬಲವೂ ಬೇಕು. ಏಕೆಂದರೆ ಉತ್ತಮ ಗುಣಮಟ್ಟದ ಪರಿಶುದ್ಧ ಉತ್ಪನ್ನಗಳಿಗೆ ಆನ್ಲೈನ್ ವೇದಿಕೆ ಸಿಗುವುದೇ ಅಪರೂಪ. ಯಾರಾದರೂ ಸ್ವದೇಶಿ ಮಾರ್ಟ್ ಮೂಲಕ ಮಾರಾಟಗಾರರಿಂದ ವಸ್ತುಗಳನ್ನು ಖರೀದಿಸುವುದಾದರೆ ಅಥವಾ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸುವವರಿದ್ದರೆ https://Swadeshimart.shop ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.

✍ ಸುಕೃತಿ ಅನಿಲ್ ಪೂಜಾರಿ 
ಶರವೂರು ಆಲಂಕಾರು

RELATED ARTICLES
- Advertisment -
Google search engine

Most Popular