ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ 2003 ರಲ್ಲಿ ಖರೀದಿಸಿದ ಟೊಯೋಟಾ ಕ್ವಾಲಿಸ್ ವಾಹನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ ಮ್ಯೂಸಿಯಂ ಗೆ ಸ್ವಾಮೀಜಿ 15-5-24 ರಂದು ವಾಹನ ವರ್ಗಾವಣೆ ಸಹಿ ಹಾಕಿ ನೀಡಿದರು. ಇದೇ ಸಂಧರ್ಭ ಚಾರಿತ್ರ ಚಕ್ರವರ್ತಿ 108 ಶಾಂತಿ ಸಾಗರ ಆಚಾರ್ಯ ಪಾದರೋಹಣ ಶತಾಬ್ದಿ ಮಹೋತ್ಸವ ಶ್ರೀ ಮಠದ ವತಿಯಿಂದ ವೇಣೂರು ಮಹಾ ಮಸ್ತಕಾಭಿಷೇಕ ಸಂಧರ್ಭ ನೆರವೇರಿಸಿದ ನೆನಪಿನಲ್ಲಿ ಡಿ. ವೀರೇಂದ್ರ ಹೆಗ್ಗಡೆ ದಂಪತಿಗಳನ್ನು ಪೂಜ್ಯ ಸ್ವಾಮೀಜಿ ಗೌರವಿಸಿ ಹರಸಿ ಅಭಿನಂದನಾ ಪತ್ರ ಶ್ರೀ ಫಲ ಮಂತ್ರಾಕ್ಷತೆ ನೀಡಿ ಹರಸಿ ಆಶೀರ್ವಾದಿಸಿದರು.

ಹೆಗ್ಗಡೆಯವರು ವಾಹನ ವಸ್ತು ಸಂಗ್ರಹಾಲಯಕ್ಕೆ ಮೋಟಾರ್ ಕಾರ್ ಕೊಡುಗೆ ನೀಡಿದ ಸ್ವಾಮೀಜಿಗಳವರಿಗೆ ಅಭಿನಂದನಾ ಪತ್ರ ನೀಡಿದರು. ಶ್ರೀ ಶೈಲೇoದ್ರ ಜೈನ್, ಪ್ರವೀಣ್ ಇಂದ್ರ ವೇಣೂರು ಎಂ. ಬಾಹುಬಲಿ ಪ್ರಸಾದ್, ನಾಗವರ್ಮ ಆದಿತ್ಯ ಜೈನ್ ಉಪಸ್ಥಿತರಿದ್ದರು.