ಸ್ವಸ್ತಿಕಾ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಪರಿಸರ ಮೈತ್ರಿ ಯೋಜನೆಗೆ ಚಾಲನೆ : ಕ್ಯಾಪ್ಟನ್ ಬ್ರಿಜೇಶ್ ಚೌಟ

0
101

ಮಂಗಳೂರು : ನಗರದ ಉರ್ವ ಪ್ರದೇಶದಲ್ಲಿ ಕಾರ್ಯಚರಿಸುತ್ತಿರುವ ಸ್ವಸ್ತಿಕಾ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್‌ನ
ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶಾಲೆಯ ರೋವರ್ಸ್ ಆಂಡ್ ರೇಂಜರ್ಸ್ ಸ್ಕೌಟ್ಸ್ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಸ್ನೇಹ ಕ್ರಾಂತಿಯ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶದೊಂದಿಗೆ “ಪರಿಸರ ಮೈತ್ರಿ” ಕಾರ್ಯಕ್ರಮವನ್ನು ಶಾಲೆಯ ನೂತನ ಸುಲ್ತಾನ್ ಬತ್ತೇರಿ ಪ್ರದೇಶದ ಸ್ವಸ್ತಿಕ್ ರಿವರ್ ಪ್ರಂಟ್ ನಿವೇಶನದಲ್ಲಿ ಹಮ್ಮಿಕೊಳ್ಳಲಾಗಿತ್ತು. ನೂತನವಾಗಿ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಸಂಸದ ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಸಿ ನೆಡುವ ಮೂಲಕ ಹಸಿರು ಅಂದೋಲನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ, ಸಂಸ್ಥೆಯ ಅಧ್ಯಕ್ಷರಾದ ಡಾ| ರಾಘವೇಂದ್ರ ಹೊಳ್ಳರಿಗೆ ಸಸಿಯನ್ನು ಹಸ್ತಾಂತರಿಸಿ, ಪರಿಸರ ರಕ್ಷಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಪ್ರತಿಯೊಬ್ಬ ನಾಗರಿಕರು ಸಸಿಗಳನ್ನು ನೆಟ್ಟು ಹಸಿರು ಕ್ರಾಂತಿಗೆ ಕೊಡುಗೆ ನೀಡುವ ಜವಾಬ್ದಾರಿಯನ್ನು ವಹಿಸಬೇಕೆಂದು ಸಲಹೆ ನೀಡಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಸಂಸ್ಥೆಯ ಪ್ರಾಂಶುಪಾಲೆಯಾದ ಮಾಲಿನಿ ಹೆಬ್ಬಾರ್ ಸ್ವಾಗತಿಸಿದರು, ರೋವರ್ಸ್ ಮತ್ತು ರೇಂಜರ್ ಸಂಸ್ಥೆಯ ನಾಯಕರಾದ ಪ್ರತಿಮ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಉದ್ಯಮಿ ನಂದನ್ ಮಲ್ಯ, ಕಟ್ಟಡ ನಿರ್ಮಾಪಕರಾದ ಅಲಂಕಾರ್ ಬಾಬು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here