Tuesday, January 14, 2025
Homeಕಾರ್ಕಳಕಾರ್ಕಳದ ಅಕ್ವಾ ಅಮಿಗೋಸ್ ಸ್ವಿಮ್ಮಿ ಫೆಸ್ಟ್ -2025 ವತಿಯಿಂದ ಈಜು ಸ್ಪರ್ಧೆ

ಕಾರ್ಕಳದ ಅಕ್ವಾ ಅಮಿಗೋಸ್ ಸ್ವಿಮ್ಮಿ ಫೆಸ್ಟ್ -2025 ವತಿಯಿಂದ ಈಜು ಸ್ಪರ್ಧೆ

ಕಾರ್ಕಳ : ಅಕ್ವಾ ಅಮಿಗೋಸ್ ಸ್ವಿಮ್ಮಿ ಫೆಸ್ಟ್ -2025 ವತಿಯಿಂದ ಜನವರಿ 12 ರಂದು ಕಾರ್ಕಳದ ಸರಕಾರಿ ಸ್ವಿಮ್ಮಿಂಗ್ ಪೂಲ್ ಕೋಟಿ ಚೆನ್ನಯ್ಯ ಪಾರ್ಕ್ ಹತ್ತಿರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳಿಗೆ ಮತ್ತು ಮಹಿಳೆ ಹಾಗೂ ಪುರುಷರಿಗೆ ಕೂಡ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ವಿವಿಧ ರೀತಿಯ ಈಜು ಸ್ಪರ್ಧೆಗಳಿಗೆ ಹೋಗಿ ಬಹುಮಾನಗಳಿಸಿರುವ ಪ್ರಖ್ಯಾತಿ ಈ ಸಂಸ್ಥೆಗಿದ್ದು ಈಗ ತನ್ನತ್ತ ಉಭಯ ಜಿಲ್ಲಾ ಮಟ್ಟದ ಸ್ಪರ್ಧಿಗಳನ್ನು ಆಕರ್ಷಿಸುವ ಕೇಂದ್ರವಾಗಿ ಬೆಳೆದಿದ್ದು ಹಲವಾರು ವಿದ್ಯಾರ್ಥಿಗಳು ಇಲ್ಲಿ ಈಜುಗಳನ್ನು ಕಲಿತು ಜಿಲ್ಲೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ.

ಈಜು ಕಲಿಯುವ ಆಸಕ್ತಿ ಇರುವಂತಹ ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಅದೇ ರೀತಿ ನಾಡಿದ್ದು ನಡೆಯುವಂತಹ ಸ್ಪರ್ಧೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಸಮಿತಿಯವರು ಈ ಮೂಲಕ ತಿಳಿಸಿರುತ್ತಾರೆ.

RELATED ARTICLES
- Advertisment -
Google search engine

Most Popular