Sunday, January 19, 2025
Homeಧಾರ್ಮಿಕಶರದ ಪವಾರ ಇವರ ಹಸ್ತದಿಂದ ಮಹಮ್ಮದ್ ಯೂನಸ ಅವರಿಗೆ ನೀಡಿದ 'ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿ...

ಶರದ ಪವಾರ ಇವರ ಹಸ್ತದಿಂದ ಮಹಮ್ಮದ್ ಯೂನಸ ಅವರಿಗೆ ನೀಡಿದ ‘ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿ ಹಿಂಪಡೆಯಿರಿ ! – ಹಿಂದೂ ಜನಜಾಗೃತಿ ಸಮಿತಿ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರಕಾರ ಪತನಗೊಂಡ ನಂತರ ಡಾ. ಮಹಮ್ಮದ ಯೂನಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂತು; ಆದರೆ ಯೂನಸ್ ಆಡಳಿತಾವಧಿಯಲ್ಲಿ ಹಿಂದೂಗಳ ಮೇಲಿನ ದಾಳಿಗಳು, ಕೊಲೆ, ಲೂಟಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು, ಬಲವಂತದ ಸ್ಥಳಾಂತರ, ದೇವಾಲಯಗಳ ಧ್ವಂಸ ಇಂತಹ ಘಟನೆಗಳಲ್ಲಿ ಭಯಾನಕ ಹೆಚ್ಚಳವಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯ ಮತ್ತು ಅನ್ಯ ಸಮುದಾಯಗಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವಲ್ಲಿ ಯೂನಸ್ ಸಂಪೂರ್ಣ ವಿಫಲರಾಗಿದ್ದಾರೆ. ಈ ವಿರುದ್ಧ ಭಾರತದಾದ್ಯಂತ ಹಿಂದೂಗಳು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಹಿಂದೂ ಜನಜಾಗೃತಿ ಸಮಿತಿ ಮಹಮ್ಮದ್ ಯೂನಸ್ ಇವರಿಗೆ 2007 ರಲ್ಲಿ ಸಕಾಳ ಸಮೂಹದ ವತಿಯಿಂದ  ರಾಷ್ಟ್ರವಾದಿ ಕಾಂಗ್ರೆಸ್ (ಶರದ ಪವಾರ ಬಣ) ಪಕ್ಷದ ಮುಖ್ಯಸ್ಥರು ಮತ್ತು ಆಗಿನ ಕೇಂದ್ರ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಅವರು ನೀಡಿದ್ದ `ಪರ್ಸನ್ ಆಫ್ ದಿ ಇಯರ್‘ ಪ್ರಶಸ್ತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು  ಒತ್ತಾಯಿಸಿದೆ.

  ಮಹಾರಾಷ್ಟ್ರದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಶರದ ಪವಾರ ಬಣ) ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ತನ್ನ ನಿಲುವನ್ನು ಮಂಡಿಸುತ್ತದೆ. ಮಹಾರಾಷ್ಟ್ರದ ಅಲ್ಪಸಂಖ್ಯಾತರಂತೆ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಬೌದ್ಧರು, ಕ್ರಿಶ್ಚಿಯನ್ನರ ಬಗ್ಗೆ ಏಕೆ ಸಹಾನುಭೂತಿ ತೋರಿಸುವುದಿಲ್ಲ ? ಬಾಂಗ್ಲಾದೇಶದ ಹಿಂದೂ ಸಮುದಾಯಕ್ಕೆ ಭಾರತದ ಅಲ್ಪಸಂಖ್ಯಾತರಂತೆ ಘನತೆಯಿಂದ ಬದುಕುವ ಅಧಿಕಾರವಿಲ್ಲವೇ ? ಬಾಂಗ್ಲಾದೇಶದಲ್ಲಿರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ ಇತ್ಯಾದಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗ ಡಾ. ಮಹಮ್ಮದ ಯೂನಸ್ ಇವರ ಮೂಕ ಪ್ರೇಕ್ಷಕನ ನಿಲುವು ಆಶ್ಚರ್ಯ ಮೂಡಿಸುತ್ತದೆ. ಇದು ಶಾಂತಿ ಮತ್ತು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ. ಆದ್ದರಿಂದ ರಾಷ್ಟ್ರವಾದಿ ಕಾಂಗ್ರೆಸ್ ಶರದ ಪವಾರ ಗುಂಪು ಅವರಿಗೆ ನೀಡಲಾಗಿರುವ ಪ್ರಶಸ್ತಿಯನ್ನು ಹಿಂಪಡೆಯಬೇಕು ಮತ್ತು ಈ ದೌರ್ಜನ್ಯಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

RELATED ARTICLES
- Advertisment -
Google search engine

Most Popular