ಬಜಪೆ:ಯಕ್ಷಗಾನ ಬಯಲಾಟದಂತೆ ತಾಳಮದ್ದಳೆಯಲ್ಲೂ ದೈವಿಕ ಶಕ್ತಿ ಅಡಗಿದ್ದು, ಅದು ಕೇವಲ ಒಂದು ಕಲೆಯಾಗಿ ಉಳಿಯದೆ ಆರಾಧನಾ ಶೈಲಿಯಾಗಿ ಬೆಳೆದುದು ತುಳುನಾಡಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಹೇಳಿದರು.
ಅವರು ಪೆರ್ಮುದೆ ಸೋಮನಾಥ ಧಾಮದಲ್ಲಿರುವ ಶ್ರೀ ಶಾರದಾ ಯಕ್ಷಗಾನ ಮಂಡಳಿಯಲ್ಲಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ, ಯಕ್ಷಕಲಾ ಮಹಿಳಾ ತಂಡ ಸುರತ್ಕಲ್ ಇವರು ನಡೆಸಿಕೊಟ್ಟ ತಾಳಮದ್ದಳೆಯ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ರಾಜೇಶ್ ಕುಳಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಳೆದ 89 ವರ್ಷಗಳಿಂದ ನಿರಂತರವಾಗಿ ಪ್ರತಿ ಶುಕ್ರವಾರ ಕಲಾ ಮಾತೆ ಶಾರದೆಗೆ ಭಕ್ತರಿಂದ ಹರಕೆ ರೂಪದಲ್ಲಿ ತಾಳಮದ್ದಳೆಯನ್ನು ನಡೆಸಿಕೊಟ್ಟ, ತಾಳಮದ್ದಲೆ ಕಲೆಯನ್ನು ಜೀವಂತಗೊಳಿಸಿದ ಯಕ್ಷಗಾನ ಮಂಡಳಿಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳೀಯ ಹವ್ಯಾಸಿ ಹಿರಿಯ ಮಹಿಳಾ ಭಾಗವತೆ ದಯಾಮಣಿ ಎಸ್ ಶೆಟ್ಟಿ ಎಕ್ಕಾರು, ಕರ್ನಾಟಕ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿನಯ ಅಚಾರ್ ಸುರತ್ಕಲ್, ಹಿರಿಯ ಚಕ್ರತಾಳ ವಾದಕ ಸುರೇಶ್ ಕಾಮತ್ ಸುರತ್ಕಲ್ ,ಪೆರ್ಮುದೆ ಪಾರಾಲೆ ಗುತ್ತು ತಿಮ್ಮಪ್ಪ ಶೆಟ್ಟಿ, ದೇವದಾಸ್ ಶೆಟ್ಟಿ ಮಾಗಂದಡಿ ಬೀಡು ದೇವದಾಸ್ ಶೆಟ್ಟಿ, ಬೊಳ್ಳೊಳ್ಳಿಮಾರು ಗುತ್ತು, ಗಡಿ ಪ್ರಧಾನರಾದ ಗುರುರಾಜ್ ಮಾಡ, ಪೆರ್ಮುದೆ ಬಿಲ್ಲವ ಸಂಘದ ಗೌರವ ಅಧ್ಯಕ್ಷ ಯಾದವ ಕೋಟ್ಯಾನ್, ಶಾರದಾ ಯಕ್ಷಗಾನ ಮಂಡಳಿಯ ಗೌರವ ಅಧ್ಯಕ್ಷ ಶ್ರೀಧರ ಶೆಟ್ಟಿ, ಮಾಜಿ ಅಧ್ಯಕ್ಷ ಶೇಖರ ಶೆಟ್ಟಿ, ಉಪಾಧ್ಯಕ್ಷ ಶ್ರೀನಿವಾಸ್ ಭಟ್ ಕಳವಾರು, ಹಿರಿಯ ಸದಸ್ಯ ರತ್ನಾಕರ ಕಂಬಳಿ, ವಜ್ರನಾಭ ಕಂಬಳಿ, ವೇದವ್ಯಾಸ ರಾವ್ ಕಳವಾರು ದಿನೇಶ್ ಶೆಟ್ಟಿ, ದೇವರಾಜ್, ನಾರಾಯಣ ಮರ್ಧನ, ರಿತೇಶ್ ಅಮೀನ್ ಉಪಸ್ಥಿತರಿದ್ದರು.
ಯಕ್ಷಕಲಾ ಮಹಿಳಾ ತಂಡದ ನಿರ್ದೇಶಕಿ ಕೆ ಕಲಾವತಿ ಟೀಚರ್ ಸ್ವಾಗತಿಸಿ, ಶಾರದಾ ಯಕ್ಷಗಾನ ಮಂಡಳಿಯ ಸದಸ್ಯ ನವೀನ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ರಾವಣ ವಧೆ ತಾಳಮದ್ದಳೆ ನಡೆಯಿತು.ಹಿಮ್ಮೇಳದಲ್ಲಿ ಶಾಲಿನಿ ಹೆಬ್ಬಾರ್, ಮುರಾರಿ ಕಡಂಬಳಿತ್ತಾಯ, ಸುಶಾಂತ್ ಕುತ್ತೆತ್ತೂರು ಅರ್ಥದಾರಿಗಳಾಗಿ ದೀಪ್ತಿ ಬಾಲಕೃಷ್ಣ ಭಟ್, ಲಲಿತಾ ಭಟ್, ಜಯಂತಿ ಎಸ್ ಹೊಳ್ಳ, ಕೆ.ಕಲಾವತಿ ಬಾಗವಹಿಸಿದ್ದರು.
