ಮೂಡುಬಿದಿರೆ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಮತ್ತು ಹೋಲಿ ರೋಸರಿ ಪ್ರೌಢಶಾಲೆ ಇದರ ಜಂಟಿ ಆಶ್ರಯದಲ್ಲಿ ಹೋಲಿ ರೋಸರಿ ಪ್ರೌಢಶಾಲಾ ಆವರಣದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕಬ್ಬಡಿ ಪಂದ್ಯಾಟದಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ಸಂದರ್ಭದಲ್ಲಿ ಸಿಸ್ಟರ್ ಪ್ರಿಯ ಮರಿಯಾ, ಬಿಇಓ ಗಣೇಶ್, ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ರಾಜಶ್ರೀ, ನಾಗೇಶ್, ಶಿವಾನಂದ ಕಾಯ್ಕಿಣಿ, ಸುನಿಲ್ ಮಿರಂದ, ರಾಮಕೃಷ್ಣ ಶಿರೂರು, ಉದ್ಯಮಿಗಳಾದ ಅವಿಶ್, ಅಕ್ರಮ್ ಶೇಕ್, ರೇವತಿ, ಕರುಣಾಕರ ಶೆಟ್ಟಿ, ಹೆಲೆನ್ ಮಥಾಯಸ್, ಮುಖ್ಯೋಪಾಧ್ಯಾಯರಾದ ಟೆಲ್ಮಾ ಡೋರಾ ಡಿಸೋಜಾ, ಸಿಸಿಲಿಯ ಡಿಸೋಜಾ, ದೈಹಿಕ ಶಿಕ್ಷಕರು, ಕ್ರೀಡಾಪಟುಗಳು, ಅಧ್ಯಾಪಕರು, ಮತ್ತು ಮಕ್ಕಳು ಮೊದಲಾದವರು ಉಪಸ್ಥಿತರಿದ್ದರು.