ವಿಜೇತ ವಿಶೇಷ ಶಾಲೆಯಲ್ಲಿ ತಾಲೂಕು ಮಟ್ಟದ ವಿಶ್ವ ಆರೈಕೆದಾರರ ದಿನಾಚರಣೆಯಲ್ಲಿ ಭಾಗವಹಿಸಿ ಉದ್ಘಾಟಿಸಿದ ಶ್ರೀ ಕೃಷ್ಣಾನಂದ್ ಕೆ. ತಾಲೂಕು ಕಾರ್ಯನಿರ್ವಾಹಣಾ ಅಧಿಕಾರಿಗಳು.
ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ರಿ. ವಿಜೇತ ವಿಶೇಷ ಶಾಲೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ ಇಂದು ತಾಲೂಕು ಮಟ್ಟದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ನೆರವೇರಿತು.
ತಾಲೂಕು ಮಟ್ಟದ ಕಾರ್ಯಕ್ರಮವನ್ನು ಶ್ರೀ ಕೃಷ್ಣಾನಂದ್ ಕೆ. ತಾಲೂಕು ಕಾರ್ಯನಿರ್ವಾಹಣಾಧಿಕಾರಿಗಳು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ವಿಶೇಷ ಚೇತನ ಮಕ್ಕಳ ಆರೈಕೆದರಾರ ಸಬಲೀಕರಣಕ್ಕೆ ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ವಿಶೇಷ ಚೇತನ ಯುವತಿ ಜ್ಯೋತಿ ಶಿಂದೆ ಇವರ ಆರೈಕೆದಾರರದ ಶಾರದ ಶಿಂದೆ ಇವರನ್ನು ಹಾಗೂ ವಿಜೇತ ಶಾಲೆಯಲ್ಲಿ ವಿಶೇಷ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವ ರಮ್ಯಾಶ್ರೀ ಶೆಟ್ಟಿ ಇವರನ್ನು ಆರೈಕೆದಾರರ ದಿನಾಚರಣೆಯ ಪ್ರಯುಕ್ತ ಗೌರವಿಸಲಾಯಿತು.
ಶಾಲಾ ಸ್ಥಾಪಕರು ಡಾ.ಕಾಂತಿ ಹರೀಶ್ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದು, ವಿಶೇಷ ಚೇತನರ ಪ್ರತಿಯೊಂದು ಕೆಲಸವನ್ನು ಯಾವುದೇ ಅಸಹ್ಯ ಭಾವನೆ ಇಲ್ಲದೆ ನಿಸ್ವಾರ್ಥಿಗಳಾಗಿ ಸೇವೆ ಸಲ್ಲಿಸುತ್ತಿರುವ ಆರೈಕೆದಾರರಿಗೆ ಮೀಸಲಾಗಿಟ್ಟ ಈ ದಿನವನ್ನು ಆಚರಿಸುವುದು ಸಂತೋಷದಾಯಕದ ವಿಚಾರವೆಂದು ತಿಳಿಸುತ್ತಾ ಪ್ರತಿಯೊಂದು ಆರೈಕೆದಾರರಿಗೆ ಅಭಿನಂದನೆಗಳನ್ನು ಅರ್ಪಿಸಿದರು .
ಸಂಪನ್ಮೂಲ ವ್ಯಕ್ತಿಗಳಾಗಿ ವಿಜೇತ ವಿಶೇಷ ಶಾಲಾ ಫಿಸಿಯೋಥೆರಪಿಸ್ಟ್ ಡಾ. ವೆನ್ಸಿಟಾ ಪ್ರಿಯಾಂಕ ಅರಾನ್ಹ ಉಪಸ್ಥಿತರಿದ್ದು , ಆರೈಕೆದಾರರ ವೈಯುಕ್ತಿಕ ಆರೋಗ್ಯಕ್ಕಾಗಿಯೂ ಸಮಯ ಮೀಸಲಿಟ್ಟು ಆರೋಗ್ಯ ಕಾಪಾಡಿಕೊಳ್ಳುವುದು ಜವಾಬ್ದಾರಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಪುನರ್ವಸತಿ ಕಾರ್ಯಕರ್ತೆಯಾಗಿರುವ ಮಂಜುಳಾ ಸುಭಾಷ್, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಟ್ಟಿ, ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಹರೀಶ್ ಉಪಸ್ಥಿತರಿದ್ದರು.
ವಿಜೇತ ಶಾಲಾ ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿಶೇಷ ಶಿಕ್ಷಕಿ ಶ್ವೇತಾ ನಿತಿನ್ ಸ್ವಾಗತಿಸಿದರು ಶ್ರೀನಿಧಿ ವಂದಿಸಿದರು.
ವಿವಿಧ ಗ್ರಾಮಗಳ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಶಾಲಾ ವಿಶೇಷ ಮಕ್ಕಳು, ಹೆತ್ತವರು, ಸಿಬ್ಬಂದಿ ವರ್ಗದವರು ಸುಮಾರು 150 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಂಡರು.