ತುಳುನಾಡಿನ ಆರಾಧ್ಯ ದೇವರಾದ ತುಳುವೇಶ್ವರ ದೇವಸ್ಥಾನ ಹಲವಾರು ಸಾವಿರ ವರ್ಷಗಳ ಇತಿಹಾಸ ಇದ್ದು, ಕುಂದಾಪುರದ ಬಸ್ರೂರಿನ ನೆಲದಲ್ಲಿ ಆಲದ ಮರದ ಪೊಟರೆಯೊಳಗೆ ನೆಲೆ ನಿಂತಿದ್ದಾನೆ. ಕಾಲದ ಮಹಿಮೆಯು, ನಮ್ಮೆಲ್ಲರ ಅನಾಸ್ತೆಯೋ ಗೊತ್ತಿಲ್ಲ. ನಶಿಸಿ ಹೋದ ದೇಗುಲಕ್ಕೆ ಪ್ರಕೃತಿಯೇ ಆವರಣವಾಗಿ, ಗರ್ಭಗುಡಿಯಾಗಿ ಆಶ್ರಯ ನೀಡಿದೆ. ಈ ದೇವಸ್ಥಾನದ ಜೀರ್ಣ ಅವಸ್ಥೆಯನ್ನು ಕಂಡು ತುಳುವರ್ಲ್ಡ್ ಫೌಂಡೇಶನ್ ಜೀರ್ಣೋದ್ಧಾರದ ಬಗ್ಗೆ ಚಿಂತಿಸಲು ಒಂದು ದಿನದ ತಾಂಬೂಲ ಪ್ರಶ್ನೆಯನ್ನು ನೆರವೇರಿಸಲು ಅಣಿಯಾಗಿದೆ.
ಶ್ರೀ ಅಪ್ಪಣ್ಣ ಹೆಗ್ಡೆ ಬಸ್ರೂರು ಇವರ ಮಾರ್ಗದರ್ಶನದಲ್ಲಿ ತುಳುವೇಶ್ವರ ದೇವಸ್ಥಾನದ ಅರ್ಚಕರಾದ ಮಹೇಶ್ ಕಿಣಿಯವರ ಸಂಚಾಲಕತ್ವದಲ್ಲಿ, ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರಿಂದ ಪ್ರಶ್ನೆ ಚಿಂತನೆ ನಡೆಯಲಿದೆ.
ಮಾರ್ಚ್ 23 ಆದಿತ್ಯವಾರ ಬೆಳಗ್ಗೆ 10 ಗಂಟೆಯಿಂದ ತುಳುವೇಶ್ವರ ದೇವಸ್ಥಾನದ ಪರಿಸರದಲ್ಲಿ ತಾಂಬೂಲ ಪ್ರಶ್ನೆ ನಡೆಯಲಿದೆ. ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು ಮನ ಧನಗಳಿಂದ ಸಹಕರಿಸಬೇಕಾಗಿ ತುಳುವರ್ಲ್ಡ್ ಫೌಂಡೇಶನ್ ಕಟೀಲಿನ ಶ್ರೀ ಸರ್ವೋತ್ತಮ ಶೆಟ್ಟಿ ಅಧ್ಯಕ್ಷರು ಹಾಗೂ ಡಾ. ರಾಜೇಶ್ ಆಳ್ವ ನಿರ್ದೇಶಕರು ವಿನಂತಿಸಿದ್ದಾರೆ.