Tuesday, January 14, 2025
Homeತುಳುನಾಡುತಮಿಳುನಾಡು: ಡಿಎಂಕೆ ಸಚಿವ ದುರೈಮುರುಗನ್ ನಿವಾಸ ಸೇರಿ ಹಲವು ಸ್ಥಳಗಳ ಮೇಲೆ ಇ.ಡಿ. ದಾಳಿ

ತಮಿಳುನಾಡು: ಡಿಎಂಕೆ ಸಚಿವ ದುರೈಮುರುಗನ್ ನಿವಾಸ ಸೇರಿ ಹಲವು ಸ್ಥಳಗಳ ಮೇಲೆ ಇ.ಡಿ. ದಾಳಿ

ಚೆನ್ನೈ: ತಮಿಳುನಾಡಿನ ಜಲಸಂಪನ್ಮೂಲ ಸಚಿವ ದುರೈಮುರುಗನ್ ಅವರ ನಿವಾಸ ಸೇರಿದಂತೆ ವೆಲ್ಲೂರಿನ ನಾಲ್ಕು ಸ್ಥಳಗಳಲ್ಲಿ ಶುಕ್ರವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ದುರೈಮುರುಗನ್ ಅವರ ಪುತ್ರ ವೆಲ್ಲೂರ್ ಸಂಸದ ಕತಿರ್ ಆನಂದ್ ಅಧ್ಯಕ್ಷತೆಯ ಕಿಂಗ್ಸ್ಟನ್ ಕಾಲೇಜು ಮತ್ತು ಪಲ್ಲಿಕೊಂಡನ್ ಮೂಲದ ಉದ್ಯಮಿ ಪೂಂಚೋಲೈ ಶ್ರೀನಿವಾಸನ್ ಮತ್ತು ಅವರ ಸಂಬಂಧಿಕರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ.

ಇಂದು ಮುಂಜಾನೆ ದಾಳಿ ನಡೆಸಿದ್ದು, ತನಿಖೆ ನಡೆಯುತ್ತಿದೆ. ದಾಳಿಯ ವೇಳೆ ಸಚಿವ ದುರೈಮುರುಗನ್ ಮತ್ತು ಸಂಸದ ಕತೀರ್ ಆನಂದ್ ಇಬ್ಬರೂ ವೆಲ್ಲೂರಿನಲ್ಲಿ ಇರಲಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

RELATED ARTICLES
- Advertisment -
Google search engine

Most Popular