Monday, December 2, 2024
Homeಕಾಸರಗೋಡುಕಾಸರಗೋಡು ಕನ್ನಡ ಭವನದಲ್ಲಿ "ಕನ್ನಡ ರಾಜ್ಯೋತ್ಸವದ ಸವಿ ಸಂಭ್ರಮ"

ಕಾಸರಗೋಡು ಕನ್ನಡ ಭವನದಲ್ಲಿ “ಕನ್ನಡ ರಾಜ್ಯೋತ್ಸವದ ಸವಿ ಸಂಭ್ರಮ”

ಕಾಸರಗೋಡು :ಬಿ ಶಿವಕುಮಾರ್ ಸಾರತ್ಯದ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಕನ್ನಡ ಭವನ ಕಾಸರಗೋಡು, ಕನ್ನಡ ಭವನ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನ ಸಭಾ ಸದನದಲ್ಲಿ ಕನ್ನಡ ರಾಜ್ಯೋತ್ಸವ ಸವಿಸಂಭ್ರಮ ಕಾರ್ಯಕ್ರಮ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಅದ್ಯಕ್ಷತೆಯಲ್ಲಿ ನಡೆಯಿತು. ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷರಾದ ಬಿ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ “ಕಾಸರಗೋಡಿನ ಕನ್ನಡಿಗರ ಕನ್ನಡ ಪ್ರೇಮ ಕರ್ನಾಟಕದ ಎಲ್ಲ ಕನ್ನಡಿಗರೀಗೆ,.. ಕನ್ನಡ ಸಂಘ ಸಂಸ್ಥೆಗಳಿಗೆ ಮಾದರಿ, ಇಲ್ಲಿ ಎಂದಿಗೂ ಕನ್ನಡ ಶಾಶ್ವತವಾಗಿ ಉಳಿಯುತ್ತೆ, ಇಲ್ಲಿನ ಮನೆ ಮನೆಗಳನ್ನು ಕನ್ನಡಸಂಸ್ಥೆಗಳ ಕಾರ್ಯಕ್ರಮ ಗಳಿಗಾಗಿ ತೆರೆದಿಟ್ಟು ಕನ್ನಡ ಉಳಿಸುವ ಧಿಶೆಯಲ್ಲಿ ಕಾರ್ಯಪ್ರವಿತ್ತರಾಗಿರುವುದೇ ಇದಕ್ಕೆ ಸಾಕ್ಷಿ. ಇದರಿಂದಲೇ ಕನ್ನಡ ಭವನ ನಮಗೆ ಮಾದರಿಯಾಗಿರುವುದು. ಇಲ್ಲಿನ ಕನ್ನಡಿಗರ ಆತಿತ್ಯ, ಕೊಡುವ ಪ್ರೀತಿ, ಗೌರವ ನಮ್ಮನ್ನು ಕಾಸರಗೋಡು ಪ್ರದೇಶಕ್ಕೆ ಪದೇ ಪದೇ ಬರಲು ಪ್ರೇರಣೆ ಎಂದು ಕಾರ್ಯಕ್ರಮ ಉದ್ಘಾಟಿಸಿ ನುಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇಂಚರ ಸಾಹಿತ್ಯ ಕುಟೀರ ಅಧ್ಯಕ್ಷ ಇಂಚರ ನಾರಾಯಣ ಸ್ವಾಮಿ, ಅಕ್ಷರ ವಿಜಯ ಮಸಾಪತ್ರಿಕೆಯ ಸಂಪಾದಕರಾದ ಪೋಸ್ಟ್ ನಾರಾಯಣ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷರಾದ ಟಿ ಸುಬ್ಬರಾಮಯ್ಯ, ಗಮನ ಮಹಿಳಾ ಸಮಾಜ ಸಂಸ್ಥಾಪಕಿ ಶಾಂತಮ್ಮ, ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ ಶರಣಪ್ಪ ಗಬ್ಬೂರ್, ಸ್ವರ್ಣಭೂಮಿ ಉಪಾಧ್ಯಕ್ಷ ತನವೀರ್ ಸಾಹಿಬ್, ಮುಂತಾದವರು ಕನ್ನಡ ಮನೆಮಾತು, ಸಾಹಿತ್ಯ, ಕಲೆ, ಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ನವೀನ್ ಎಂ, ಏನ್ ವೆಂಕಟರಾಜಮ್ಮ, ವರ್ಷ ಏನ್, ರಂಗಭೂಮಿ ಕಲಾವಿದೆ ಲಕ್ಷ್ಮಿ ದೇವಿ ಕೋಲಾರ, ಬ್ರಿನಿಂದ ಎಂ, ರಾಜಕುಮಾರ್, ನಂಜುಂಡಪ್ಪ ಬಿ ವಿ ಕೋಲಾರ, ಹಿಬಾ ಸಯ್ಯದ್ ಮುಂತಾದವರು ಉಪಸ್ಥಿತರಿದ್ದು ವಿವಿಧ ಪ್ರಾಕಾರಗಳಲ್ಲಿ ನುಡಿ ಸೇವೆ ಸಲ್ಲಿಸಿದರು. ಕನ್ನಡ ಭವನ ವತಿಯಿಂದ ಕೋಲಾರದಿಂದ ಬಂದ ಸಾಹಿತ್ಯ ಅತಿಥಿಗಳಿಗೆ ಪ್ರಮಾಣ ಪತ್ರ, ಪುಸ್ತಕ ಸ್ಮರಣಿಕೆ, ಶಾಲು ಹೊದಿಸಿ ಗೌರವಿಸಿತು. ಈ ವೇದಿಕೆಯಲ್ಲಿ ಕೋಲಾರದ ಬಿ ಶಿವಕುಮಾರ್ ರನ್ನು “ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರನ್ನಾಗಿ ಆಯ್ಕೆ ಮಾಡಿ ಅಧಿಕಾರ ಪತ್ರ ಹಸ್ತಾಂತರಿಸಿತು. ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಸಂಚಾಲಕಿ ಸಂದ್ಯಾ ರಾಣಿ ಟೀಚರ್ ವಂದಿಸಿದರು. ಕೋಲಾರದ ಸಾಹಿತ್ಯ ತಂಡ ಕನ್ನಡ ಭವನ ವಾಚನಾಲಾಯ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular