ಮಂಗಳೂರ: ಭಾರತದ ಪ್ರಮುಖ ವಾಹನ ತಯಾರಕರಾಗಿರುವ ಟಾಟಾ ಮೋಟಾರ್ಸ್ ಇಂದು ₹ 9.99 ಲಕ್ಷ ಆರಂಭಿಕ ಬೆಲೆಯಲ್ಲಿ ಟಾಟಾ ಕರ್ವ್- ಎಸ್‌ಯುವಿ ಕೂಪ್ ಬಿಡುಗಡೆ ಮಾಡಿದೆ.

ಕರ್ವ್ ಬಿಡುಗಡೆ ಮಾಡುವ ಮೂಲಕ ಕಂಪನಿಯು ಅದ್ಭುತ ಬಾಡಿ ಸ್ಟೈಲ್ ಹೊಂದಿರುವ ಐಸಿಇ ವೇರಿಯಂಟ್ ಗಳ ಮೂಲಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಿಡ್-ಎಸ್‌ಯುವಿ ವಿಭಾಗಕ್ಕೆ ಅದ್ದೂರಿಯಾಗಿ ಪ್ರವೇಶಿಸುತ್ತಿದೆ.
ಪ್ರಸ್ತುತ ಟಾಟಾ ಮೋಟಾರ್ಸ್ ಮೂರು ಎಂಜಿನ್ ಆಯ್ಕೆಗಳಲ್ಲಿ ಕರ್ವ್ ಅನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಆಯ್ಕೆಗಳಲ್ಲಿಯೂ ಅತ್ಯಾಧುನಿಕ ಡ್ಯುಯಲ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಲಭ್ಯವಿದೆ. ಹೊಸ ಶಕ್ತಿಶಾಲಿ ಹೈಪರಿಯನ್ ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್, 1.2ಲೀ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಮತ್ತು ಹೊಸ 1.5ಲೀ ಕ್ರಯೋಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಕರ್ವ್ ಲಭ್ಯವಿದ್ದು, ವಿಶೇಷವಾಗಿ ಇದೇ ಮೊದಲ ಬಾರಿಗೆ ಡೀಸೆಲ್ ವಿಭಾಗದಲ್ಲಿ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಒದಗಿಸುತ್ತಿದೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಮಾತನಾಡಿ, ಟಾಟಾ ಕರ್ವ್ ನ ಬಿಡುಗಡೆಯು ಉತ್ಕೃಷ್ಟ ಆಟೋಮೋಟಿವ್ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಅದ್ಭುತವಾದ ಬೆಳವಣಿಗೆಯನ್ನು ಸೂಚಿಸುತ್ತದೆ. ಯಾಕೆಂದರೆ ಈ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ಟಾಟಾ ಮೋಟಾರ್ಸ್ ಜಾಗತಿಕವಾಗಿ ಭಾರಿ ಮನ್ನಣೆ ಗಳಿಸಿರುವ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ ಮಾತ್ರ ಲಭ್ಯವಿದ್ದ ಎಸ್‌ಯುವಿ ಕೂಪ್ ಬಾಡಿ ಸ್ಟೈಲ್ ಅನ್ನು ಭಾರತಕ್ಕೆ ಪರಿಚಯಿಸುತ್ತಿದೆ. ಆರ್ಕಿಟೆಕ್ಚರ್ ಆಗಿರುವ ಎಟಿಎಲ್ಎಎಸ್ ಮತ್ತು ಲೆವೆಲ್ 2 ಎಡಿಎಎಸ್ ಸೌಲಭ್ಯಗಳನ್ನು ಹೊಂದಿದೆ. ವಿಶೇಷವಾಗಿ ನಾವು ಕರ್ವ್ ನ ಎಲ್ಲಾ ವೇರಿಯಂಟ್ ಗಳನ್ನು ಅತ್ಯಂತ ಆಕರ್ಷಕ ಬೆಲೆಯಲ್ಲಿ ನೀಡುತ್ತಿದ್ದೇವೆ. ಈ ಕಾರಣದಿಂದ ಗ್ರಾಹಕರು ಇತ್ತ ನೋಡದೇ ಇರುವುದು ಅಸಾಧ್ಯವಾದಂತೆ ಮಾಡಿದ್ದೇವೆ. ಇಂದು ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಗ್ರಾಹಕರು ಈ ವಿಭಿನ್ನ ಕಾರ್ ಅನ್ನು ಆನಂದಿಸುತ್ತಾರೆ ಎಂಬ ನಂಬಿಕೆ ನಮಗಿದೆ” ಎಂದು ಹೇಳಿದರು.