ಮಂಗಳೂರು:ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಆಗಿರುವ ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ವಾಹನ ಗ್ರಾಹಕರಿಗಾಗಿ ವಿಶೇಷವಾಗಿ ‘ಕಸ್ಟಮರ್ ಕೇರ್ ಮಹೋತ್ಸವ’ವನ್ನು ಆಯೋಜಿಸಿದೆ. ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಗಿರೀಶ್ ವಾಘ್ ಅವರು ಕಸ್ಟಮರ್ ಕೇರ್ ಮಹೋತ್ಸವದ 2024ರ ಆವೃತ್ತಿಯನ್ನು ಉದ್ಘಾಟಿಸಿದರು. ಗ್ರಾಹಕರಿಗೆ ಸೂಕ್ತ ರೀತಿಯ ಸರ್ವೀಸ್ ಒದಗಿಸುವ ಉದ್ದೇಶದಿಂದ ಆಯೋಜಿಸಿರುವ ಈ ಉತ್ಸವವು ಅಕ್ಟೋಬರ್ 23ರಿಂದ ಡಿಸೆಂಬರ್ 24ರವರೆಗೆ ನಡೆಯಲಿದೆ.
ಈ ವಿಶಿಷ್ಟ ಕಾರ್ಯಕ್ರಮವು ದೇಶದಾದ್ಯಂತ ಇರುವ 2500ಕ್ಕೂ ಹೆಚ್ಚು ಅಧಿಕೃತ ಸರ್ವೀಸ್ ಸೆಂಟರ್‌ಗಳಲ್ಲಿ ನಡೆಯಲಿದೆ.ಈ ಮಹೋತ್ಸವದಲ್ಲಿ ಗ್ರಾಹಕರು ಹಲವಾರು ಪ್ರಯೋಜನಗಳನ್ನು ಪಡೆಯಲಿದ್ದು, ತರಬೇತಿ ಪಡೆದ ತಂತ್ರಜ್ಞರು ವಾಹನ ತಪಾಸಣೆ ನಡೆಸಲಿದ್ದಾರೆ. ಜೊತೆಗೆ ಗ್ರಾಹಕರು ಮೌಲ್ಯವರ್ಧಿತ ಸೇವೆಗಳನ್ನು ಪಡೆಯಲಿದ್ದಾರೆ. ಅವೆಲ್ಲದರ ಜೊತೆಗೆ ಚಾಲಕರು ಸಂಪೂರ್ಣ ಸೇವಾ 2.0 ಯೋಜನೆಯ ಅಡಿಯಲ್ಲಿ ಹಲವು ಪ್ರಯೋಜನ ಪಡೆಯುವುದರ ಜೊತೆಗೆ ಸುರಕ್ಷಿತ ಚಾಲನೆ ಮತ್ತು ಇಂಧನ ಉಳಿಸುವ ಚಾಲನೆ ತರಬೇತಿ ಪಡೆಯಲಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಗಿರೀಶ್ ವಾಘ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, “ಅಕ್ಟೋಬರ್ 23ರಂದು ಕಸ್ಟಮರ್ ಕೇರ್ ಮಹೋತ್ಸವ ಆರಂಭವಾಗಿದ್ದು ಈ ಉತ್ಸವವನ್ನು ಮರಳಿ ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ. ಅ.23 ನಮಗೆ ಮಹತ್ವದ ದಿನವಾಗಿದೆ. ಯಾಕೆಂದರೆ 1954ರಲ್ಲಿ ಈ ದಿನ ನಾವು ನಮ್ಮ ಮೊದಲ ವಾಣಿಜ್ಯ ವಾಹನವನ್ನು ಮಾರಾಟ ಮಾಡಿದ್ದೆವು. ಆದ್ದರಿಂದ ಈ ದಿನವನ್ನು ನಾವು ಕಸ್ಟಮರ್ ಕೇರ್ ದಿನ ಎಂದು ಆಚರಿಸುತ್ತೇವೆ. ಉತ್ತಮ ರೀತಿಯ ವಾಹನ ತಪಾಸಣೆಯ ಮೂಲಕ ಮತ್ತು ಹಲವಾರು ಪ್ರಯೋಜನಗಳನ್ನು ಒದಗಿಸುವ ಮೂಲಕ ಅತ್ಯುತ್ತಮ ದರ್ಜೆಯ ಸೇವೆಯನ್ನು ನೀಡುವ ನಮ್ಮ ಬದ್ಧತೆಗೆ ಈ ಮಹೋತ್ಸವ ಒಂದು ಪುರಾವೆಯಾಗಿದೆ. ಮಹೋತ್ಸವದ ಸಂದರ್ಭದಲ್ಲಿ ದೇಶದಾದ್ಯಂತ ಇರುವ ಎಲ್ಲಾ ಟಚ್‌ಪಾಯಿಂಟ್‌ನಲ್ಲಿಯೂ ನಮ್ಮ ಗ್ರಾಹಕರು ಸಂತೋಷ ಹೊಂದುತ್ತಾರೆ ಎಂಬ ಭರವಸೆ ನಮಗಿದೆ. ಆ ಮೂಲಕ ನಮ್ಮ ಎಲ್ಲಾ ಪಾಲುದಾರರ ಜೊತೆಗಿನ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.