Saturday, July 20, 2024
Homeರಾಜ್ಯಅರಳಿ ಗಿಡ ನೆಡುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಅರಳಿ ಗಿಡ ನೆಡುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಅರಳಿ ಮರ ಧಾರ್ಮಿಕವಾಗಿ ಎಷ್ಟು ಸ್ಥಾನ ಪಡೆದಿದೆಯೋ ಅಷ್ಟೇ ಮನುಷ್ಯನಿಗೂ ಬಹು ಪ್ರಯೋಜನವಾಗಿರುವ ಮರ ಎಂದರೆ ತಪ್ಪಾಗಲಿಕ್ಕಿಲ್ಲ, ಏಕೆಂದರೆ 24 ಗಂಟೆ ಆಕ್ಸಿಜನ್ ಕೊಡುವ ಅಂದರೆ ಮನುಷ್ಯ ಪ್ರಾಣಿ ಪಕ್ಷಿಗಳಿಗೆ ಬೇಕಾಗುವ ಗಾಳಿಯನ್ನು ಉತ್ಪಾದಿಸುವ ಮರ ಇದಾಗಿದೆ ಅಲ್ಲದೇ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಲು ಹಾಗೂ ಆಹಾರವಾಗಿ ಬಳಕೆಯಾಗುತ್ತದೆ.ಅಲ್ಲದೇ ಆಯುರ್ವೇದ ಪದ್ಧತಿಯಲ್ಲಿ ಉತ್ತಮ ಸ್ಥಾನ ಪಡೆದಿದೆ. ಅದೆನೋ ಗೊತ್ತಿಲ್ಲ ಕೆಲವು ಈ ಪವಿತ್ರ ಮರದ ವಿಷಯಗಳನ್ನು ಅರಿಯದ ಮೂರ್ಖರು. ಸುಳ್ಳು ವದಂತಿ ಹಬ್ಬಿಸಿ ಈ ಮರ ನೆಡಬಾರದು ಇದರಿಂದ ಒಳ್ಳೇದಾಗಲ್ಲ ಕೆಡುಕಾಗುತ್ತದೆಯೆಂದು ಹೇಳುತ್ತಾ ಈ ಮರ ಅಳಿವಿನಂಚಿಗೆ ತಲುಪಿದೆ ನನ್ನ ಪ್ರಕಾರ ನೆಡಬಾರದು ಎಂಬುದು ತಪ್ಪು ಕಲ್ಪನೆ ಕೀಳುವುದು ದೊಡ್ಡ ಅಪರಾಧ.

ನಮ್ಮ ಹಿರಿಯರು ಮರಗಳ ಉಳಿವಿಗಾಗಿ ಪವಿತ್ರ ಸ್ಥಾನಮಾನ ಕೊಟ್ಟಿದ್ದಾರೆ ತುಂಬಾ ಉಪಕಾರಿ ಮರಗಳ ಬಗ್ಗೆ ತಿಳಿದ ನಮ್ಮ ಪೂರ್ವಿಕರು ದೈವಿಕ ಸ್ಥಾನಮಾನವನ್ನು ಕೊಟ್ಟಿದ್ದಾರೆ, ಏಕೆಂದರೆ ಎಲ್ಲಾ ಬೇಕೆಂಬ ಆಸೆಯಲ್ಲಿ ಮರಗಳ ಸರ್ವನಾಶ ಮಾಡಿ ಬಿಡುತ್ತಾನೆ.ಭಯ ಭಕ್ತಿ ಇದ್ದಕಾರಣ ಮರಗಳು ಸ್ವಲ್ಪವಾದರೂ ಉಳಿದಿದೆ
ದಯವಿಟ್ಟು ನಾವು ಅರಳಿಮರವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುವ. ಸುಳ್ಳು ವದಂತಿ, ಮೂಡನಂಬಿಕೆಯ ಬಗ್ಗೆ ಕಿವಿ ಕೊಡದೆ ವಾತಾವರಣ ಶುದ್ಧಿಗೊಳಿಸುವ ಗಿಡವನ್ನು ಬೆಳೆಸೋಣ.
ಈಗ ರಸ್ತೆ ಬದಿ ಸಾಲು ಮರಗಳ ಜೊತೆ ಅರಳಿ ಮರ ನೆಡುವುತ್ತಿರುವುದು ಖುಷಿಯ ಸಂಗತಿ.

✍🏿ವಿನೇಶ್ ಪೂಜಾರಿ ನಿಡ್ಡೋಡಿ (ಪರಿಸರವಾದಿ )

RELATED ARTICLES
- Advertisment -
Google search engine

Most Popular