spot_img
29.6 C
Udupi
Wednesday, June 7, 2023
spot_img
spot_img
spot_img

ಕಡಲಕೆರೆ ಬಳಿ ಹತ್ತಾರು ಎಕರೆ ಜಾಗ ಬೆಂಕಿಗಾಹುತಿ


ಮೂಡುಬಿದಿರೆ: ” ಒಂಟಿಕಟ್ಟೆ ಕಡಲಕೆರೆಯ ನಿಸರ್ಗಧಾಮದ ಬಳಿ ಹತ್ತು ಎಕರೆಗಿಂತಲೂ ಹೆಚ್ಚಿನ ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಅಧಿ ಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿ ಕಾರಿಗಳು ಬೆಂಕಿ ಪಡುತ್ತಿದ್ದಾರೆ. ನಂದಿಸಲು ಹರಸಾಹಸ

ಕಡಲಕೆರೆ ಅಗ್ನಿಶಾಮಕ ದಳದ ಕಚೇರಿ ಮತ್ತು ವಸತಿಗೃಹದ ಸುತ್ತ, ನೆಲ್ಲಿಗುಡ್ಡೆ, ಕಡ್ಲಗುಡ್ಡೆ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆಯ ವೇಳೆಗೆ ಬೆಂಕಿ ಹೊತ್ತಿ ಉರಿಯಲಾರಂಭಿಸಿದೆ.

ನಿಸರ್ಗಧಾಮದ ಸಾಲು ಮರದ ತಿಮ್ಮಕ್ಕ ಉದ್ಯಾನವನ, ಕಡಲಕೆರೆ ಕೈಗಾರಿಕಾ ಪ್ರದೇಶದ ಬಳಿ ಹೊಗೆ ತುಂಬಿಕೊಂಡಿದೆ.

ಅಗ್ನಿಶಾಮಕ ದಳದ ವಸತಿಗೃಹದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಸರಕಾರಿ ಜಾಗವು ಕಾಡು ಪ್ರದೇಶದಿಂದ ಕೂಡಿರುವುದರಿಂದ ಅಗ್ನಿಶಾಮಕ ವಾಹನವು ಒಳ ಹೋಗಿ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ. ಅಲ್ಲದೆ ಅಗ್ನಿಶಾಮಕ ದಳದಲ್ಲಿ ಸಿಬ್ಬಂದಿಗಳ ಕೊರತೆಯೂ ಇರುವುದರಿಂದ ಬೆಂಕಿ ನಂದಿಸಲು ಕಷ್ಟಸಾಧ್ಯವಾಗುತ್ತಿದೆ.
ಸಹಾಯಕ ಅಗ್ನಿಶಾಮಕ ಅಧಿಕಾರಿ ಸ್ಟೀಫನ್ ಮತ್ತು ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸುತ್ತಿದ್ದಾರೆ.

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಕಂಬಳ ಓಟಗಾರ ರಿತೇಶ್ ಹಾಗೂ ಒಂಟಿಕಟ್ಟೆಯ ಯುವಕರು ಬೆಂಕಿ ನಂದಿಸಲು ಮತ್ತು ನೀರಿನ ವ್ಯವಸ್ಥೆಗೆ ಸಹಕರಿಸಿದ್ದಾರೆ.

Related Articles

Stay Connected

0FansLike
3,804FollowersFollow
0SubscribersSubscribe
- Advertisement -

Latest Articles