ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ವೆಲ್ ನಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಭೀಕರವಾಗಿ ಕೊಂದು ಎಸ್ಕೇಪ್ ಆಗಿರುವ ಘಟನೆ ನಗರದ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಗೌಸಿಯ ಬಿ ಕೊಲೆಯಾದ ಮಹಿಳೆ. ಇಮ್ರಾನ್ ಎಂಬಾತನೇ ಪತ್ನಿಯನ್ನ ಕೊಲೆಗೈದು ಎಸ್ಕೇಪ್ ಅದ ಆರೋಪಿಯಾಗಿದ್ದಾನೆ.
ಶುಕ್ರವಾರ ಈ ಒಂದು ಕೊಲೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಂದ್ರಾ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಇಮ್ರಾನ್ ಫ್ಯಾಬರಿಕ್ ಕೆಲಸ ಮಾಡಿಕೊಂಡಿದ್ದನು. ಕೊಲೆ ಮಾಡಿ ಎಸ್ಕೇಪ್ ಆಗುವಾಗ ಸಹೋದ್ಯೋಗಿಗಳ ಜೊತೆ ಹಣ ಕೇಳಿದ್ದ ಆರೋಪಿ ಇಮ್ರಾನ್. ಆತನ ಸಹೋದ್ಯೋಗಿಗಳು ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಚಾರವನ್ನು ಕೆಲಸಗಾರರು ಮಾಲೀಕರಿಗೆ ಹೇಳಿದ್ದರು. ಇಮ್ರಾನ್ ಹಣ ಕೇಳಿಕೊಂಡು ಬಂದಿರುವುದಾಗಿ ಹೇಳಿದ್ರು. ಹಣ ಕೇಳಿಕೊಂಡು ಬಂದಿರುವ ವಿಚಾರವನ್ನು ಮಾಲೀಕ ಕೊಲೆಯಾದ ಗೌಸಿಯಾ ಕುಟುಂಬಸ್ಥರಿಗೆ ಹೇಳಿದ್ದರು.
ಈ ವೇಳೆ ಗೌಸಿಯ ಸಹೋದರ ಮನೆಗೆ ಹೋದಾಗ ಮನೆಯ ಚಿಲಕ ಹಾಕಿದರಿಂದ ಎಲ್ಲೋ ಹೊರಗಡೆ ಹೋಗಿರಬೇಕು ಎಂದು ಅವರು ವಾಪಸ್ ಆಗಿದ್ದಾರೆ. ಆದರೆ ರಾತ್ರಿ ಬಂದು ನೋಡಿದಾಗಲು ಕೂಡ ಹಾಕಿದ ಬಾಗಿಲು ಹಾಗೆ ಇದ್ದ ಕಾರಣ ಅನುಮಾನದಿಂದ ಮಾಲೀಕರ ಜೊತೆ ಕೀ ಕೇಳಿ ಬಾಗಿಲು ತೆರೆಯಲು ಯತ್ನಿಸಿದ್ದರು. ಬಾಗಿಲು ಓಪನ್ ಆದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಾಸಿಗೆ ಮೇಲೆ ಗೌಸಿಯಾ ಅಂಗಾತ ಬಿದ್ದಿದ್ದರು. ಬಳಿಕ ಕುಟುಂಬಸ್ಥರು ಚಂದ್ರಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.