Saturday, September 14, 2024
HomeUncategorizedಮಾಸ್ಕೊದ ಸಮ್ಮೇಳನದಲ್ಲಿ ಭಯೋತ್ಪಾದಕರ ದಾಳಿ

ಮಾಸ್ಕೊದ ಸಮ್ಮೇಳನದಲ್ಲಿ ಭಯೋತ್ಪಾದಕರ ದಾಳಿ

ಮಾಸ್ಕೊ: ರಷ್ಯಾ ರಾಜಧಾನಿ ಮಾಸ್ಕೊದ ಸಮ್ಮೇಳನ ಸಭಾಂಗಣಕ್ಕೆ ನುಗ್ಗಿದ ಶಸ್ತ್ರಸಜ್ಜಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 143 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಕರಣ ಸಂಬಂಧ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರಲ್ಲಿ ನಾಲ್ವರು ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮ್ಮೇಳನ ಸಭಾಂಗಣದ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಇದೇ ವೇಳೆ ಸಭಾಂಗಣಕ್ಕೆ ನುಗ್ಗಿದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ಶಂಕಿತ ನಾಲ್ವರು ಭಯೋತ್ಪಾದಕರನ್ನು ಪಶ್ಚಿಮ ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದವರು ಎಂದು ಹೇಳಲಾಗಿದೆ. ಆರೋಪಿಗಳು ರಷ್ಯಾ ಗಡಿ ದಾಟಿ ಉಕ್ರೇನ್‌ಗೆ ಪ್ರವೇಶಿಸಲು ಯೋಜನೆ ರೂಪಿಸಿದ್ದು, ಕೆಲವು ಉಕ್ರೇನಿಯನ್ನರ ಜತೆ ಸಂಪರ್ಕ ಹೊಂದಿದ್ದರು ಎಂದು ರಷ್ಯಾದ ರೋಸ್ಟೋವ್ ಪ್ರದೇಶದಲ್ಲಿ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಹೇಳಿಕೆ ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ. ಘಟನೆ ಸಂಬಂಧ ಎಫ್‌ಎಸ್‌ಬಿ ಮುಖ್ಯಸ್ಥರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಉಕ್ರೇನ್, ಅಮಾನವೀಯವಾದ ಈ ಘಟನೆಗೂ ಉಕ್ರೇನ್‌ಗೂ ಸಂಬಂಧವಿಲ್ಲ ಎಂದು ಹೇಳಿದೆ.

RELATED ARTICLES
- Advertisment -
Google search engine

Most Popular