ನವದೆಹಲಿ: ಎಂತೆಂತಾ ಅಪಘಾತಗಳನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಅಪಘಾತ ನಿಜಕ್ಕೂ ಬೆಚ್ಚಿಬೀಳುವಂತೆ ಮಾಡಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಥಾರ್ ಜೀಪೊಂದು ಕರೆಂಟ್ ಕಂಬವೇರಿ ನಿಂತಿದೆ.
ಹರಿಯಾಣದ ಗುರುಗ್ರಾಮ್ ನಗರದ ಸೈಬರ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಅತಿ ವೇಗದಲ್ಲಿ ಬಂದ ಹೋಂಡಾ ಅಮೇಜ್ ಕಾರು ಮಹೀಂದ್ರಾ ಥಾರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ನಿಂತ್ರಣ ಕಳೆದುಕೊಂಡ ಥಾರ್ ವಿದ್ಯುತ್ ಕಂಬವೇರಿ ನಿಂತಿದೆ.
ಸ್ಥಳೀಯರ ನೆರವಿನಿಂದ ಥಾರ್ ಚಲಾಯಿಸುತ್ತಿದ್ದ ಯುವತಿಯನ್ನು ಕೆಳಗೆ ಇಳಿಸಲಾಯಿತು. ಕಾರು ಚಲಾಯಿಸಿದ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.