ಮೂಲ್ಕಿ, ಆ. 1: ದೇವಾಡಿಗ ಸಮಾಜ ಸೇವಾ ಸಂಘ ಬಪ್ಪನಾಡು ಮೂಲ್ಕಿ ಇದರ ಆಶ್ರಯದಲ್ಲಿ ಆ. 11ರಂದು ಸಂಘದ ಸಭಾ ಭವನದಲ್ಲಿ ಆಟಿದ ಗೌಜಿ ಕಾರ್ಯಕ್ರಮ ನಡೆಯಲಿದೆ. ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಇತರ ಗಣ್ಯರು ಭಾಗವಹಿಸುವರು ಎಂದು ಸಂಘದ ಅಧ್ಯಕ್ಷ ಬಿ. ಸಂಜೀವ ದೇವಾಡಿಗ ತಿಳಿಸಿದ್ದಾರೆ. ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಆಟಿ ತಿಂಗಳ ಖಾದ್ಯದ ವಿಶೇಷ ಭೋಜನದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ.