ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬ್ರಹ್ಮ ಶ್ರೀ ಸತ್ಯಸಾರಮಣಿ ದೇವಸ್ಥಾನದಲ್ಲಿ 29ನೇ ವರ್ಷದ ಬ್ರಹ್ಮ ಶ್ರೀ ಸತ್ಯ ಸಾರಮಣಿ ದೈವಗಳ ನೇಮೋತ್ಸವ ಶನಿವಾರ ವಿಜ್ರಂಭನೆಯಲ್ಲಿ ಜರುಗಿತು.
ದೈವಗಳಿಗೆ ಶುದ್ಧೀಕರಣ ಮತ್ತು ನಾಗದೇವರಿಗೆ ತನು ತಂಬಿಲ ಸೇವೆ,ನಂತರ ಮಹಾಪೂಜೆ, ಅನ್ನಸಂತರ್ಪಣೆ ದಾನಿಗಳ ಪ್ರಸಾದ ವಿತರಣೆ ಸತ್ಯಾಸಾರಮಣಿ ದೈವಗಳ ನೇಮೋತ್ಸವ ಹಲೇರ ಪಂಜುರ್ಲಿ ಗಗ್ಗರ ಸೇವೆ, ಕಲತ ಗುಳಿಗ ದೈವಗಳ ನೇಮೋತ್ಸವ, ಚಾಮುಂಡಿ ಮತ್ತು ಗುಳಿಗ ದೈವಗಳ ಗಗ್ಗರ ಸೇವೆ, ದೈವಗಳ ತಂಬಿಲ ಸೇವೆ ಇತ್ಯಾದಿ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಸತ್ಯ ಸಾರಮಣಿ ದೈವಸ್ಥಾನ ಅಧ್ಯಕ್ಷರು ಧರ್ಮಣ್ಣ ನಿಟ್ಟೆ, ಗೌರವಾಧ್ಯಕ್ಷರು ಪೆರ್ಗು ಪೂಜಾರಿ, ಸಮಿತಿಯು ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಾವಿರಾರು ಭಕ್ತಾದಿಗಳು ದೈವದ ನೇಮೋತ್ಸವದಲ್ಲಿ ಭಾಗಿಯಾಗಿ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.