Sunday, July 14, 2024
Homeರಾಷ್ಟ್ರೀಯವಿಶ್ವ ಸುಂದರಿ ಬ್ಯೂನಸ್ ಐರಿಸ್-2024 ಪ್ರಶಸ್ತಿ ಗೆದ್ದ 60 ವರ್ಷದ ಮಹಿಳೆ

ವಿಶ್ವ ಸುಂದರಿ ಬ್ಯೂನಸ್ ಐರಿಸ್-2024 ಪ್ರಶಸ್ತಿ ಗೆದ್ದ 60 ವರ್ಷದ ಮಹಿಳೆ

ಅರ್ಜೆಂಟೀನಾ: 60 ವರ್ಷದ ಮಹಿಳೆಯೊಬ್ಬರು ಸೌಂದರ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಿಂದ ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ವಿಶ್ವ ಸುಂದರಿ ಬ್ಯೂನಸ್ ಐರಿಸ್ 2024 ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಹಿರಿಯ ವಕೀಲರು ಮತ್ತು ಪತ್ರಕರ್ತೆಯೂ ಆಗಿದ್ದಾರೆ.
ಬ್ಯೂನಸ್ ಐರಿಸ್ ಪ್ರಾಂತ್ಯದ ಪರವಾಗಿ ಮೇ 2024ರಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಅರ್ಜೆಂಟೀನಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಸುಂದರಿ ವಿಶ್ವ ವೇದಿಕೆಯಲ್ಲಿ ರೋಡ್ರಿಗಸ್ ಅರ್ಜೆಂಟೀನಾದ ಧ್ವಜವನ್ನು ಹಾರಿಸುತ್ತಾರೆ. ಈ ಸ್ಪರ್ಧೆಗಳು 2024 ಸೆಪ್ಟೆಂಬರ್ 28ರಂದು ಮೆಕ್ಸಿಕೋದಲ್ಲಿ ನಡೆಯಲಿದೆ.
ವಿಶ್ವಸುಂದರಿ ಸ್ಪರ್ಧೆಗಳಲ್ಲಿ ಭಾಗವಹಿಸಲು ವಯಸ್ಸಿನ ಮಿತಿ ಇತ್ತು. 18 ರಿಂದ 28 ವರ್ಷದೊಳಗಿನ ಅವಿವಾಹಿತ ಮತ್ತು ಮಕ್ಕಳಿಲ್ಲದ ಜನರು ಮಾತ್ರ ಭಾಗವಹಿಸಬೇಕಾಗಿತ್ತು. ಇದೀಗ 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

RELATED ARTICLES
- Advertisment -
Google search engine

Most Popular