ಮಧ್ಯರಾತ್ರಿ, ಚೆಡ್ಡಿ ಧರಿಸಿದ ಕೆಲವರು ಮಿಯಾಪುರ್ ಪ್ರದೇಶದ ವರ್ಲ್ಡ್ ಒನ್ ಶಾಲೆಗೆ ಹರಿತವಾದ ಆಯುಧಗಳೊಂದಿಗೆ ನುಗ್ಗಿದರು. ನಂತರ ಅವರು ಶಾಲೆಯ ಆಡಳಿತಾತ್ಮಕ ಬ್ಲಾಕ್ ನಲ್ಲಿರುವ ಕೌಂಟರ್ ನಿಂದ 7.85 ಲಕ್ಷ ರೂ.ಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ಕೋಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.